Kannada NewsKarnataka NewsLatest

ಮೋದಿ ಜನ್ಮ ದಿನ, ದೀನ್ ದಯಾಳ್ ಹಾಗೂ ಗಾಂಧೀ ಜಯಂತಿ ನಿಮಿತ್ತ ಬಿಜೆಪಿಯಿಂದ ಹಲವು ಕಾರ್ಯಕ್ರಮ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಧಾನಮಂತ್ರಿ ನರೇಂದ್ರಮೋದಿಯವರ 70ನೇ ಜನ್ಮದಿನದ ಪ್ರಯುಕ್ತ  ಸೆಪ್ಟಂಬರ್ ೧೪ ರಿಂದ ಸೆಪ್ಟೆಂಬರ್ ೨೦, ೨೦೨೦ರತನಕ ನಡೆಯುವ ಈ ಸೇವಾ ಸಪ್ತಾಹದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ  ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಪ್ರತೀ ಮಂಡಲಗಳಲ್ಲಿ ೭೦ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡುವುದು.
೭೦ ಬಡ ಪುರುಷರು ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡುವುದು.
ಕೋವಿಡ್ ೧೯ ರ ನಿಯಮಗಳನ್ನು ಪಾಲಿಸಿ ಪ್ರತೀಜಿಲ್ಲೆಯ ೭೦ ಆಸ್ಪತ್ರೆ ಮತ್ತು ಬಡ ಕಾಲೋನಿಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವುದು.
ಸ್ಥಳೀಯ ಅವಶ್ಯಕತೆಗನುಗುಣವಾಗಿ ಆಸ್ಪತ್ರೆಯ ಮೂಲಕ ಕೋವಿಡ್-೧೯ ರಿಂದ ಪೀಡಿತರಾದ ೭೦ ವ್ಯಕ್ತಿಗಳಿಗೆ ಪ್ಲಾಸ್ಮಾದಾನಮಾಡುವುದು.
ಯುವಮೋರ್ಚಾದ ವತಿಯಿಂದ ರಾಜ್ಯದಲ್ಲಿ ೭೦ ರಕ್ತದಾನ ಶಿಬಿರಗಳನ್ನು ಮಾಡುವುದು. ಪ್ರತೀ ಜಿಲ್ಲೆಗಳಲ್ಲಿ ಕನಿಷ್ಟ ೧ ರಕ್ತದಾನ ಶಿಬಿರ ಆಯೋಜಿಸುವುದು.
ಪ್ರತೀ ಬೂತ್‌ನಲ್ಲಿ ೭೦ ವೃಕ್ಷಾರೋಪಣಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪಕಾರ್ಯಕ್ರಮ.
ಪ್ರತೀ ಜಿಲ್ಲೆಗಳ ೭೦ ಹಳ್ಳಿಗಳಲ್ಲಿ ಸ್ವಚ್ಛತಾಅಭಿಯಾನವನ್ನು ನಡೆಸುವುದು. ಒಂದು ಬಾರಿಉಪಯೋಗಿಸುವ ಪ್ಲ್ಲಾಸ್ಟಿಕ್ನಿ ಷೇಧಿಸುವ ಸಂಕಲ್ಪವನ್ನು ಮಾಡುವುದು ಮತ್ತು ಜನರನ್ನು ಪ್ರಧಾನಮಂತ್ರಿಗಳ ಸಿಂಹವಾಣಿಯ ಈ ಕರೆಗೆ ಜೋಡಿಸುವುದು.
ಪ್ರತೀ ಜಿಲ್ಲಾ ಕೇಂದ್ರದಲ್ಲಿ ೭೦ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವುದು.
ಪ್ರಧಾನಮಂತ್ರಿಗಳ   ವ್ಯಕ್ತಿತ್ವ ಮತ್ತು ದೃಷ್ಟಿಕೋನ ಕುರಿತಂತೆ ೭೦ ದೊಡ್ಡ ವರ್ಚುವಲ್ ಸಮಾವೇಶವನ್ನು ನಡೆಸುವುದು. ಈ ಸಮಾವೇಶದಲ್ಲಿ ಸಮಾಜದ ಪ್ರಮುಖರು, ಪ್ರಬುದ್ಧ ನಾಗರಿಕರಿಂದ ಉಪನ್ಯಾಸ ಏರ್ಪಡಿಸಲಾಗುವುದು.
ಕಳೆದ ವರ್ಷ ಪ್ರಧಾನಮಂತ್ರಿಗಳ ಮೂಲಕ ಮಾಡಲಾದ ಕಾರ್ಯಗಳ ಮತ್ತು ವ್ಯಕ್ತಿತ್ವ ಕುರಿತ ಪ್ರದರ್ಶಿನಿಗಳನ್ನು ಪ್ರತಿಯೊಂದು ರಾಜ್ಯದಲ್ಲಿಆಯೋಜನೆ ಮಾಡಲಾಗಿತ್ತು. ಕೋವಿಡ್ ೧೯ನ್ನು ಗಮನದಲ್ಲಿಟ್ಟುಕೊಂಡು ಅದರಲ್ಲಿಯ ೭೦ ಸ್ಲೈಡ್‌ಗಳನ್ನು ಈ ವರ್ಷವೂ ಪ್ರದರ್ಶಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪ್ರಚಾರ ಮಾಡುವುದು.

ಪಂ.ದೀನದಯಾಳ್ ಜಯಂತಿ- ಸೆಪ್ಟೆಂಬರ್ ೨೫

ಸೆಪ್ಟೆಂಬರ್ ೨೫ಕ್ಕೆ ಪಂ.ದೀನದಯಾಳ್ ಉಪಾಧ್ಯಾಯರವರ ಜನ್ಮ ದಿನ. ಪಕ್ಷದ ಮೂಲಕ ಬೂತ್ ಸ್ತರದಲ್ಲಿಆಯೋಜಿಸಲ್ಪಡುವ ೬ ಅಖಿಲ ಭಾರತ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವೂ ಒಂದು.
ಎಲ್ಲಾ ಬೂತ್‌ಗಳಲ್ಲಿ ಪಂ.ದೀನದಯಾಳ್ ಜೀಯವರ ಪ್ರತಿಮೆಗಳಿಗೆ / ಭಾವಚಿತ್ರಗಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನುಮಾಡುವುದು. ಎಲ್ಲಾಕಾರ್ಯಕರ್ತರುತಮ್ಮ ಮನೆಗಳಲ್ಲಿ
ಪಂ.ದೀನದಯಾಳ್‌  ಪ್ರತಿಮೆ / ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಮಾಡುವುದು.
ಕೋವಿಡ್ ೧೯ನ್ನು ಗಮನದಲ್ಲಿಟ್ಟುಕೊಂಡು ವೆಬಿನಾರ್ ಮೂಲಕ ಪ್ರತೀ ಜಿಲ್ಲೆಗಳಲ್ಲಿ ಪಕ್ಷದ ವಿಚಾರಧಾರೆ ಮತ್ತು ಪಂ.ದೀನದಯಾಳ್‌ ಜೀವನಕುರಿತುಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವುದು.

ಗಾಂಧಿಜಯಂತಿ- ೨ ಅಕ್ಟೋಬರ್

ಅಕ್ಟೋಬರ್ ೨ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿ. ಕಳೆದ ವರ್ಷದೇಶಾದ್ಯಂತ ಗಾಂಧಿ ಸಂಕಲ್ಪ ಯಾತ್ರೆಯನ್ನು ಆಯೋಜನೆ ಮಾಡಲಾಗಿತ್ತು ಮತ್ತುಅವರ ಸ್ವದೇಶೀ, ಸ್ವಭಾಷಾ, ಸ್ವಭೂಷಣ, ಖಾದಿ, ಸ್ವಾವಲಂಬನೆ, ಸರಳತೆ, ಸ್ವಚ್ಛತೆ ಕುರಿತ ಅಭಿಯಾನವನ್ನು ಕೈಗೊಳ್ಳಲಾಗಿತ್ತು.
೨೫ ಸೆಪ್ಟೆಂಬರ್‌ನಿಂದ ೨ ಅಕ್ಟೋಬರ್‌ವರೆಗೆ ಪ್ರಧಾನಮಂತ್ರಿಗಳು ದೇಶಕ್ಕೆ ನೀಡಿದ್ದ ‘ಆತ್ಮನಿರ್ಭರ ಭಾರತ’ದ ಸಂಕಲ್ಪವನ್ನು ವಿವಿಧ ಪ್ರಕಾರಗಳ ಸಂವಾದ ಕಾರ್ಯಕ್ರಮಗಳ ಮೂಲಕ ಜನಮನಗಳಿಗೆ ತಲುಪಿಸುವ ಯೋಜನೆಯನ್ನು ಮಾಡಲಾಗಿದೆ. ಖಾದಿ ಉಪಯೋಗ ಮತ್ತು ಸ್ಥಾನೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವ ಅಭಿಯಾನ .
ಪ್ರಧಾನಮಂತ್ರಿಗಳ ಮೂಲಕ ಘೋಷಣೆಯಾಗಿದ್ದ ೨೦ ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್‌ನ ವಿವಿಧ ಯೋಜನೆಗಳನ್ನು ಬೂತ್ ಸ್ತರದ ತನಕ ಪ್ರಚಾರ – ಪ್ರಸಾರಮಾಡುವುದು. ಈ ಮೂಲಕ ಜನಸಾಮಾನ್ಯರಿಗೆ ಈ ಯೋಜನೆಗಳ ಕುರಿತು ಮಾಹಿತಿ ಮತ್ತುಅದರ ಉಪಯೋಗ ಸಿಗುವಂತಾಗಬೇಕೆನ್ನುವುದು ಇದರ ಉದ್ದೇಶ.
ಪ್ರತೀ ಜಿಲ್ಲೆಗಳಲ್ಲಿ ಆತ್ಮನಿರ್ಭರ ಪ್ಯಾಕೇಜ್‌ನ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವೆಬಿನಾರ್ ಸಭೆಗಳ ಮೂಲಕ ವಿಷಯತಜ್ಞರರಿಂದ ಉಪನ್ಯಾಸಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಈ ಎಲ್ಲ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ರಾಜು ಚಿಕ್ಕನಗೌಡರ, ಜಿಲ್ಲಾ ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜೇರ, ನಿತೀನ ಚೌಗುಲೆ, ಸಿದ್ದಯ್ಯಾ ಹಿರೇಮಠ ಇವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button