Latest

ಯಂಗೆಸ್ಟ್ ಸಚಿವ ಸಂಪುಟ ಕೀರ್ತಿ ಮೋದಿ ಸರಕಾರಕ್ಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತದಲ್ಲಿ ಈವರೆಗೆ ಆಗಿಹೋಗಿರುವ ಎಲ್ಲ ಸಚಿವಸಂಪುಟಗಳಲ್ಲಿ ಅತ್ಯಂತ ಯಂಗೆಸ್ಟ್ ಸಚಿವಸಂಪುಟ ಎನ್ನುವ ಕೀರ್ತಿಗೆ ಸಧ್ಯದ ನರೇಂದ್ರ ಮೋದಿಸರಕಾರ ಪಾತ್ರವಾಗಿದೆ.

ಇಂದು ವಿಸ್ತರಣೆಯಾಗಿರುವ ಸಚಿವರನ್ನೂ ಸೇರಿಸಿ ಸಧ್ಯದ ಕೇಂದ್ರ ಸಚಿವರ ಸರಾಸರಿ ವಯಸ್ಸು 58 ವರ್ಷ. 14 ಸಚಿವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.   ಪಶ್ಚಿಮ ಬಂಗಾಳದ ನಿಸಿತ್ ಪ್ರಮಾಣಿಕ (35) ಸಂಪುಟದ ಅತ್ಯಂತ ಕಿರಿಯ ಸಚಿವ.

ರವಿಶಂಕರ ಪ್ರಸಾದ, ಪ್ರಕಾಶ ಜಾವಡೆಕರ್ , ಹರ್ಷವರ್ಧನ, ಸದಾನಂದ ಗೌಡ ಸೇರಿದಂತೆ ಒಟ್ಟೂ 12 ಸಚಿವರ ರಾಜಿನಾಮೆ ಪಡೆದಿರುವ ನರೇಂದ್ರ ಮೋದಿ, 43 ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಭಾರಿ ಸರ್ಜರಿಯನ್ನೇ ಮಾಡಿದ್ದಾರೆ.

ವಕೀಲರು ಮತ್ತು ವೈದ್ಯರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಪುಟಕ್ಕೆ ಸೇರಿಸಿಕೊಂಡಿರುವುದು ಈ ಬಾರಿಯ ವಿಶೇಷ. ಒಟ್ಟೂ 77 ಜನರು ಸಧ್ಯ ಕೇಂದ್ರ ಸಂಪುಟದಲ್ಲಿದ್ದು, ಇನ್ನೂ 4 ಸ್ಥಾನ ಕಾಲಿ ಇದೆ.

Home add -Advt

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು

 

Related Articles

Back to top button