Latest

ವೈರಲ್ ಆಯ್ತು ಮೋದಿಯವರ ಅಂದಿನ ಭಾಷಣ

ಬಿಜೆಪಿಗರಿಗೆ ಮುಜುಗರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದೆನ್ನಲಾದ ನರೇಂದ್ರ ಮೋದಿ ಅವರ ಭಾಷಣವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದು ಬೆಲೆ ಏರಿಕೆ ವಿರುದ್ಧ ಮೋದಿ ಪ್ರಧಾನ ಮಂತ್ರಿಯನ್ನು ಹಿಗ್ಗಾಮುಗ್ಗಾ ಝಾಡಿಸಿದ್ದರು. ಪ್ರಧಾನಿಗೆ ಅಹಂಕಾರ ಹೆಚ್ಚಾಗಿದೆ. ಬೆಲೆ ಏರಿಕೆ ಕುರಿತು ಮಾತನಾಡಲೂ ಸಿದ್ದರಿಲ್ಲ. ಬಡವರು ಏನನ್ನು ತಿನ್ನಬೇಕು? ಚುನಾವಣೆಯ ದಿನ ಮತ ಚಲಾಯಿಸಲು ಹೋಗುವಾಗ ಗ್ಯಾಸ್ ಸಿಲೆಂಡರ್ ಗೆ ನಮಸ್ಕಾರ ಮಾಡಿ ಹೋಗಿ ಎಂದೆಲ್ಲ ಮೋದಿ ಭಾಷಣ ಮಾಡಿದ್ದರು.
ಈಗಿನ ಬೆಲೆ ಏರಿಕೆಯ ಚಾರ್ಟ್ ಜೊತೆಗೆ ಮೋದಿಯವರು ಅಂದಿನ ಭಾಷಣ ಜೋಡಿಸಿ ಸಾಂದರ್ಭಿಕವಾಗಿ ವಿಡಿಯೋ ಮಾಡಲಾಗಿದೆ.
ವಿಡಿಯೋ ಈಗ ಬಿಜೆಪಿಗರಿಗೆ ತೀವ್ರ ಮುಜುಗರ ತರುವಂತಿದೆ. ಕಾಂಗ್ರೆಸ್ ಈ ವಿಡೀಯೋವನ್ನು ತಯಾರಿಸಿರುವ ಸಾಧ್ಯತೆ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬಂಗಾರದ ಬೆಲೆ ಇಂದು ಎಷ್ಟಿದೆ?

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಟಾಂಗಾ ರ್ಯಾಲಿ; ಕುದುರೆ ಟಾಂಗಾ ಮೂಲಕ ಅಧಿವೇಶನಕ್ಕೆ ಎಂಟ್ರಿಕೊಟ್ಟ’ ಕೈ’ ನಾಯಕರು

Home add -Advt

Our Social media Link’s:

Related Articles

Back to top button