Film & EntertainmentLatestNational

*ಲೈಂಗಿಕ ಕಿರುಕುಳ: 7 ಜನಪ್ರಿಯ ನಟರ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಮಲಯಾಳಂ ಚಿತ್ರರಂಗದ 7 ಜನಪ್ರಿಯ ನಟರು, ರಾಜಕಾರಣಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ನಟ, ರಾಜಕಾರಣಿ ಮುಖೇಶ್, ನಟರಾದ ಜಯಸೂರ್ಯ, ಮಣಿಯನ್ ಪಿಳ್ಳರಾಜು, ಇಡವೇಲ ಬಾಬು, ಪ್ರೊಡೆಕ್ಷನ್ ಟೀಂ ನ ನೋಬೆಲ್, ವಿಚು ಹಾಗೂ ವಕೀಲ ವಿ.ಎಸ್.ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಎ ಎಂ ಎಂ ಎ ಸಂಘಟನೆ ಸದಸ್ಯತ್ವ ನೀಡುವುದಾಗಿ ಹೇಳಿ ಚಿತ್ರ ಹಿಂಸೆ ನೀಡಿರುವ ಆರೋಪದಲ್ಲಿ ನಟ ಇಡವೇಲ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ನಟಿಯೊಬ್ಬರ ಹೇಳಿಕೆ ಆಧರಿಸಿ ಎರ್ನಾಕುಲಂ ಪೊಲೀಸರು ಜಮೀನು ರಹಿತ ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.

Home add -Advt

ಸಿನಿಮಾ ಸೆಟ್ ನಲ್ಲಿ ಚಿತ್ರಹಿಂಸೆ ನೀದಲು ಯತ್ನ ನಡೆಸಿದ್ದ ಆರೋಪದಲ್ಲಿ ಮಣಿಯನ್ ಪಿಳ್ಳ ರಾಜು ವಿರುದ್ಧ ಫೋರ್ಟ್ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಜಯಸೂರ್ಯ ವಿರುದ್ಧ ತಿರುವನಂತಪುರ ಕಂಟೋನ್ಮೆಂಟ್ ಠಾಣೆಯಲ್ಲಿ ಪ್ರಕರ್ನ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಗೆ ಅವಮಾನ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಲಾಗಿದೆ.

ಕೊಚ್ಚಿಯ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ಶಾಸಕ, ನಟ ಮುಖೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ವಿಶೇಷ ತನಿಖಾ ತಂದ ರಚಿಸಿರುವ ಪೊಲೀಸರು, ಅಲುವಾದಲ್ಲಿರುವ ನಟಿಯ ಫ್ಲ್ಯಾಟ್ ಗೆ ತೆರಳಿ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button