Film & EntertainmentKarnataka News

*ಕೂಲಿಂಗ್ ಗ್ಲಾಸ್ ಧರಿಸಿ ಸ್ಟೈಲಿಶ್ ಆಗಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ: ಸಿಬ್ಬಂದಿಗೆ ಸಂಕಷ್ಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಕೂಲಿಂಗ್ ಗ್ಲಾಸ್, ಬ್ರ್ಯಾಂಡೆಡ್ ಟೀ ಶರ್ಟ್, ಬೆಳ್ಳಿ ಕಡಗ ಧರಿಸಿ ಸ್ಟೈಲಿಶ್ ಲುಕ್ ನಲ್ಲಿ ನಟ ದರ್ಶನ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಕ್ಕೆ ಉತ್ತರ ವಲಯ ಕಾರಾಗೃಹಗಳ ಮಹಾನಿರೀಕ್ಷಕ ಟಿ.ಪಿ‌.ಶೇಷ ಗರಂ ಆಗಿದ್ದು,  ಕೊಲೆ ಆರೋಪಿ ದರ್ಶನ ಕರೆತಂದ ಬೆಂಗಾವಲು ಪಡೆ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಯವರಿಗೆ ಮನವಿ ಮಾಡಿದ್ದಾರೆ.

ಇನ್ನು ಕೊಲೆ ಆರೋಪಿ ದರ್ಶನ ಕೂಲಿಂಗ್ ಗ್ಲಾಸ್, ಬ್ರ್ಯಾಂಡೆಡ್ ಟೀ ಶರ್ಟ್, ಬೆಳ್ಳಿ ಕಡಗ ಧರಿಸಿ ಜೈಲಿಗೆ ಎಂಟ್ರಿ ಕೊಟ್ಟ ವಿಚಾರಕ್ಕೆ ದರ್ಶನ್ ಏನು ಪಿಕ್ನಿಕ್‌ಗೆ ಬರ್ತಿದ್ದಾನಾ? ದೃಷ್ಟಿದೋಷಕ್ಕೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ತಾರಾ? ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರ್ತಾರೆ ಅಂದ್ರೆ ಏನರ್ಥ? ಒಂದ್ ಸಿಗರೇಟ್ ವಿಚಾರಕ್ಕೆ ಇಷ್ಟೆಲ್ಲಾ ತೊಂದರೆ ಆಗಿದೆ. 7 ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ದರ್ಶನ ಕೂಲಿಂಗ್ ಗ್ಲಾಸ್ ಧರಿಸಿ ಜೈಲಿಗೆ ಬರ್ತಾರೆ ಅಂದ್ರೆ ಏನರ್ಥ? ಬ್ರ್ಯಾಂಡೆಡ್ ಟೀ ಶರ್ಟ್, ಶೂಸ್ ಹಾಕಿದ್ದು ಏನ್ ತಪ್ಪಲ್ಲ. ಗಾಗಲ್ ಹಾಕಿಕೊಂಡು ಬಂದಿದ್ದು ತಪ್ಪು. 

Home add -Advt

ಇಷ್ಟೆಲ್ಲ ರಾಡಿ ಆದ್ಮೇಲೆ ಬೆಂಗಾವಲು ಸಿಬ್ಬಂದಿ ಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಕಾರಾಗೃಹ ಇಲಾಖೆ ಉತ್ತರ ವಲಯ ಕಾರಾಗೃಹಗಳ ಮಹಾನಿರೀಕ್ಷಕ ಟಿ.ಪಿ.ಶೇಷ ಅವರು ಗರಂ‌‌ ಆಗಿದ್ದಾರೆ

Related Articles

Back to top button