Kannada NewsWorld

*ಜಗತ್ತಿನಾದ್ಯಂತ ಮತ್ತೊಂದು ವೈರಸ್ ಆತಂಕ; ಮಂಕಿಪಾಕ್ಸ್ ಗೆ 500 ಜನರು ಬಲಿ*

ಪ್ರಗತಿವಾಹಿನಿ ಸುದ್ದಿ: ಮಹಾಮಾರಿ ಕೊರೊನಾ ವೈರಸ್ ಬಳಿಕ ವಿವಿಧ ವೈರಸ್ ಗಳು ಜಗತ್ತಿನ ಜನರನ್ನು ಕಾಡುತ್ತಿವೆ. ಇದರ ನಡುವೆಯೇ ಪ್ರಪಂಚದಾದ್ಯಂತ ಇದೀಗ ಮತ್ತೊಂದು ಸೋಂಕಿನ ಆತಂಕ ಎದುರಾಗಿದೆ. ಮಂಕಿಪಾಕ್ಸ್ ಗೆ ಬರೋಬ್ಬರಿ 500 ಜನರು ಸಾವನ್ನಪ್ಪಿರುವ ಘಟನೆ ಕಾಂಗೋದಲ್ಲಿ ನಡೆದಿದೆ.

ಈ ಘಟನೆ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅಲರ್ಟ್ ಘೋಷಣೆ ಮಾಡಿದೆ. ಕಾಂಗೋದಲ್ಲಿ 14,000 ಜನರಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ. 500 ಜನರು ಮಂಕಿಪಾಕ್ಸ್ ಗೆ ಬಲಿಯಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೆಲ್ತ್ ಎಮರ್ಜನ್ಸಿ ಘೋಷಣೆ ಮಾಡಿದೆ.

ಭಾರತದಲ್ಲಿ ಜೂನ್ ವರೆಗೆ 27 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿಯೂ ಮಂಕಿಪಾಕ್ಸ್ ಭೀತಿ ಎದುರಾಗಿದೆ. ಅದರಲ್ಲಿಯೂ 15 ವರ್ಷದೊಳಗಿನ ಮಕ್ಕಳಿಗೆ ಈ ಸೋಂಕು ಡೆಂಜರಸ್ ಆಗಿದೆ.

ಮಂಕಿಪಾಕ್ಸ್ ಲಕ್ಷಣಗಳು:
ಕೈ, ಕಾಲು, ಎದೆ, ಮುಖ, ಬಾಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಸಣ್ಣ ಗುಳ್ಳೆಗಳು ದೊಡ್ಡದಾಗಿ ಕೀವು ತುಂಬಿರುತ್ತವೆ. ವಾಸಿಯಾಗುವ ಮುನ್ನ ದೇವಿಡೀ ಗುಳ್ಳೆಗಳಾಗುತ್ತವೆ.
ಗುಳ್ಳೆ ಕಾಣಿಸಿಕೊಳ್ಳುತ್ತಿದಂತೆ ಜ್ವರ, ತಲೆನೋವು, ಮೈಕೈ ನೋವು, ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತದೆ.

Home add -Advt

7ರಿಂದ 14 ದಿನಗಳವರೆಗೆ ಸೋಂಕು ಇರುತ್ತದೆ. ಮಂಕಿಪಾಕ್ಸ್ ಮಾರಣಾಂತಿಕವಾಗಿದ್ದು, ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.


Related Articles

Back to top button