Kannada NewsLatest

*ಮಳೆ ವಿಳಂಬ; ಬಿತ್ತನೆ ಮಾಡಿದ ರೈತರಿಗೆ ಶಾಕ್; ಟ್ಯಾಂಕರ್ ನೀರಿನಿಂದ ಗದ್ದೆಗೆ ನೀರು ಹಾಯಿಸುತ್ತಿರುವ ರೈತರು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈ ಬಾರಿ ಮಳೆ ವಿಳಂಬವಾಗಿದ್ದು, ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಬೆಳಗಾವಿ ಭಾಗದ ರೈತರು ಮಳೆ ನಿರೀಕ್ಷೆಯಲ್ಲಿ ಹೊಲಗಳಲ್ಲಿ ಭತ್ತ ಬಿತ್ತನೆ ಮಾಡಿದ್ದು, ಆದರೆ ಮಳೆ ಬಾರದ ಕಾರಣ ಬಿತ್ತಿದ ಭತ್ತ ಒಣಗಲಾರಂಭಿಸಿದೆ. ಇದರಿಂದ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಈ ಬಾರಿ ಮುಂಗಾರು ವಿಳಂಬವಾಗುತ್ತಿದೆ ಮಾತ್ರವಲ್ಲ ಬರಗಾಲದ ಛಾಯೆ ಮೂಡಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ರೈತರು ತಾವು ಬಿತ್ತಿದ ಬೆಳಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್ನಿದ ನೀರು ತಂದು ಹೊಲಗಳಿಗೆ ನೀರು ಹರಿಸುತ್ತಿದ್ದಾರೆ.

ಬೆಳಗಾವಿಯ ಯಳ್ಳೂರು, ಧಾಮನೆ, ವಡಾಗಾವಿ ಶಹಾಪುರ ಸೇರಿದಂತೆ ಹಲವೆಡೆಗಳಲ್ಲಿ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದು, ಒಂದು ಟ್ಯಾಂಕರ್ ನೀರಿಗೆ 1000 ರೂ ಹಣ ಕೊಟ್ಟು ಬಿತ್ತನೆ ಒಣಗದಂತೆ ನಾಲ್ಕು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ ಎಂದಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button