ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಇಲ್ಲಿಯ ಸೂರ್ಯನಾರಾಯಣ ಹಗೇದ ಕಿರಿಯ ವಯಸ್ಸಿನಲ್ಲಿ ಭಾರತೀಯ ಸೇನೆಯಲ್ಲಿ ಲೆಪ್ಟಿನಂಟ್ ಹುದ್ದೆಯನ್ನು ಪಡೆದಿದ್ದಾರೆ.
ವಿಜಯಪುರದ ಸೈನಿಕ್ ಶಾಲೆಯಲ್ಲಿ ಶೇ.93ರಷ್ಟು ಅಂಕಗಳನ್ನು ಪಡೆದು ದ್ವಿತೀಯ ಪಿಯುಸಿ ತೇರ್ಗಡೆಯಾಗಿ ನಂತರ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ಪ್ರತಿಭಾ ಪರೀಕ್ಷೆಯಲ್ಲಿ 392ನೇ ರ್ಯಾಂಕ್ ಪಡೆದು ಆಯ್ಕೆಯಾದರು.
ಪುಣೆಯ ನ್ಯಾಶನ್‍ನಲ್ ಡಿಫೆನ್ಸ್ ಅಕಾಡೆಮಿಯಲ್ಲಿ 3 ವರ್ಷ ಮತ್ತು ಡೆಹರಾಡೂನ್‍ದ ನ್ಯಾಶನಲ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷ ನಿಗದಿಪಡಿಸಿದ ಅವಧಿಯಲ್ಲಿ ತರಬೇತಿಯನ್ನು ಮುಗಿಸಿ ಲೆಪ್ಟಿನಂಟ್ ಹುದ್ದೆಗೆ ಆಯ್ಕೆಯಾದರು. ಸಧ್ಯ ಫೀಲ್ಡ್ ಮಾರ್ಷಲ್ ಕರಿಯಪ್ಪ ಮತ್ತು ಜನರಲ್ ವಿ.ಕೆ. ಸಿಂಗ್ ಕಾರ್ಯನಿರ್ವಹಿಸಿದ್ದ ರಜಪೂತ ರೆಜಿಮೆಂಟಿನಲ್ಲಿ ಕತ್ಯವ್ಯಕ್ಕೆ ಹಾಜರಾಗಿದ್ದಾರೆ.
ಕೇವಲ 21 ವಯಸ್ಸು 5 ತಿಂಗಳ ಕಿರಿಯ ವಯಸ್ಸಿನಲ್ಲಿ ಲೆಪ್ಟಿನಂಟ್‍ನಂತ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಸೂರ್ಯನಾರಾಯಣ್‍ರದು ಅಪೂರ್ವ ಸಾಧನೆಯಾಗಿದೆ. ತಂದೆ ನಿಂಗಪ್ಪ ಹಗೇದ ಮಾಜಿ ಸೈನಿಕರಾಗಿದ್ದು, ತಾಯಿ ರೇಣುಕಾ ಹಗೇದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ. ಇವರಿಗೆ ಏಕೈಕ ಪುತ್ರನಾಗಿರುವ ಸೂರ್ಯನಾರಾಯಣ್‍ನ್ನು ದೇಶ ಸೇವೆಗಾಗಿ ಸೇನೆಗೆ ಕಳಿಸುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ