Kannada NewsLatest

ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಭಾವೈಕ್ಯತೆ ವೃದ್ಧಿ: ಪಿ.ಜಿ.ಆರ್ ಸಿಂಧ್ಯಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಯುತ್ತಾರೆ . ಇದರಿಂದ ದೇಶದಲ್ಲಿ ಭಾವೈಕ್ಯತೆ ಬೆಳೆಯಲು ಸಹಾಯವಾಗುತ್ತದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಹೇಳಿದರು.

ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಗಾವಿ ಜಿಲ್ಲಾ ಸಂಸ್ಥೆಯ ನವಿಕೃತ ಕೇಂದ್ರದ ಕಾರ್ಯಾಲಯ  ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕಾದರೆ ಅನೇಕ ನಾಯಕರು  ಕೊಡುಗೆ ನೀಡಿದ್ದಾರೆ. ಅಂಥವರ ಸಾಲುಗಳಲ್ಲಿ ಅಗ್ರಗಣ್ಯರು ಭಾರತದ ಉಪ ರಾಷ್ಟ್ರಪತಿ ಬಿ .ಡಿ ಜತ್ತಿಯವರು. ಅಂಥವರು ಈ ಕಟ್ಟಡದ ಅಡಿಪಾಯ ಹಾಕಿರುವುದು ಹೆಮ್ಮೆಯ ಸಂಗತಿ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವ ಮಾಡಿದ್ದು ಅದರಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಅನೇಕ ಮಾನವೀಯ ಮೌಲ್ಯಗಳ ಜೊತೆಗೆ ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಉತ್ತಮ ಅನುಭವ ಎಂದ ಅವರು, ಜಾಂಬೂರಿ ಉತ್ಸವಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿಕೊಟ್ಟ ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು, ಬಿಇಒಗಳು ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು .

ಧಾರವಾಡ ಅಪರ ಆಯುಕ್ತರ ಕಾರ್ಯಾಲಯದ ಜಂಟಿ ನಿರ್ದೇಶಕ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಮತ್ತು ಸಹಾಯಕ ರಾಜ್ಯ ಆಯುಕ್ತ ಗಜಾನನ ಮಣ್ಣಿಕೇರಿ ಮಾತನಾಡಿ , ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ ಮತ್ತು ಗೈಡ್ ಸಹಾಯಕಾರಿಯಾಗಲಿದೆ. ಅಖಂಡ ಬೆಳಗಾವಿ ಜಿಲ್ಲೆಗೆ ಬಹುದೊಡ್ಡ ಕಚೇರಿ ಸುಂದರವಾಗಿ ನವೀಕೃತಗೊಂಡು ಜಿಲ್ಲಾ ಕೇಂದ್ರ ಕಾರ್ಯಾಲಯದ ನಿರ್ಮಾಣವಾಗಲು ಪಿಜಿಆರ್ ಸಿಂಧ್ಯಾ ಅವರ ವಿಶೇಷ ಕಾಳಜಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಇನ್ನು ಮುಂದೆ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಬಂದಂತಾಗಿದೆ ಎಂದರು .

ಮೂಡುಬಿದರೆಯ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಾದ ಮುಸ್ಕಾನ್ ಮುಲ್ಲಾ, ಶ್ರೀನಿವಾಸ , ಲಕ್ಷ್ಮಿ ಮಾಳಿ ವಿದ್ಯಾರ್ಥಿಗಳು ತಮ್ಮ ಅನುಭವದ ಅನಿಸಿಕೆ ಹಂಚಿಕೊಂಡರು. ಪಿ ಜಿ ಆರ್ ಸಿoಧ್ಯಾ ಅವರನ್ನು ಬೆಳಗಾವಿ ಜಿಲ್ಲಾ ಸಂಸ್ಥೆಯ ವತಿಯಿಂದ ಜಂಟಿ ನಿರ್ದೇಶಕ ಗಜಾನನ ಮಣ್ಣಿಕೇರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಸನ್ಮಾನಿಸಿದರು.

ಬಸವರಾಜ ನಾಲತವಾಡ, ಮೋಹನಕುಮಾರ ಹಂಚಾಟಿ, ವೈ.ಜಿ. ಭಜಂತ್ರಿ ,ಎಸ್.ಪಿ. ದಾಸಪ್ಪನವರ, ಆರ್.ಟಿ. ಬಳಿಗಾರ, ಎ.ಎನ್. ಫ್ಯಾಟಿ, ಎಸ್.ಸಿ. ಕರಿಕಟ್ಟಿ, ಎಂ.ಎನ್. ದಂಡಿನ, ಜಿ.ಬಿ. ಬಳಗಾರ, ಎಜಿ ಮಣ್ಣಿಕೇರಿ, ಪಿ.ಬಿ. ಹಿರೇಮಠ, ಆರ್‌.ಎಂ. ಮಠದ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಗುರುಗಳು ಹಾಗೂ ಗುರುಮಾತೆಯರು ಇದ್ದರು.

ಪ್ರಭಾವತಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ  ಮಾತನಾಡಿದರು . ಡಿ.ಬಿ. ಅತ್ತಾರ ನಿರೂಪಿಸಿದರು . ವಿಠ್ಠಲ ಎಸ್.ಬಿ. ವಂದಿಸಿದರು.

*ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/special-grant-in-budget-for-peanut-research-center-chief-minister-basavaraja-bommai/

*ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಶಶಿಧರ ಹೆಗಡೆ ನಂದಿಕಲ್‌ ಅಪ್ಪಟ ಗ್ರಾಮೀಣ ಪ್ರತಿಭೆ*

https://pragati.taskdun.com/shashidhar-hegade-nandical-a-recipient-of-the-media-academy-award-is-a-genuine-rural-talent/

*ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

https://pragati.taskdun.com/balachandra-jarakiholikallolikalala-samajasamavesha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button