Kannada NewsKarnataka NewsLatest

ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಎಲ್ಲ ಪಕ್ಷಗಳಿಗಿಂತ ಹೆಚ್ಚು ಗೌರವ -ವೀರೇಶ ಕಿವಡಸಣ್ಣವರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿ ಬೆಳಗಾವಿ ಉತ್ತರ ಪ್ರಶಿಕ್ಷಣ ವರ್ಗ ಶನಿವಾರ ನಡೆಯಿತು.

ಒಂದನೇ ಅವಧಿಯಲ್ಲಿ ನಮ್ಮ ಕಾರ್ಯ ಪದ್ಧತಿ ಮತ್ತು ಸಂಘಟನೆಯ ಸಂರಚನೆ ವಿಷಯದ ಮೇಲೆ ಜಿಲ್ಲಾ ಕಾರ್ಯದರ್ಶಿ ರಾಜು ಚಿಕ್ಕನ್ನಗೌಡರ ಮಾತನಾಡಿದರು.

ಮೊದಲ ಅವಧಿಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷ ವೀರೇಶ ಕಿವಡಸಣ್ಣವರ ವಹಿಸಿದ್ದರು. ಪಕ್ಷದ ಬೆಳವಣಿಗೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಕುರಿತು ಅವರು ವಿವರಿಸಿದರು. ಬಿಜೆಪಿ ಕಾರ್ಯಕರ್ತರಿಂದಲೇ ಬೆಳೆದ ಪಕ್ಷ. ಕಾರ್ಯಕರ್ತರಿಗೆ ಎಲ್ಲ ಪಕ್ಷಗಳಿಗಿಂತ ಹೆಚ್ಚು ಗೌರವ ಬಿಜೆಪಿಯಲ್ಲಿದೆ. ಹಾಗಾಗಿ ಕಾರ್ಯಕರ್ತರು ಅತ್ಯಂತ ಶಿಸ್ತಿನಿಂದ, ಸಂಯಮದಿಂದ ತಮ್ಮ ಕೆಲಸ, ಕಾರ್ಯಗಳನ್ನು ಮುಂದುವರಿಸೋಣ ಎಂದು ವೀರೇಶ ಕಿವಡಸಣ್ಣವರ್ ಹೇಳಿದರು.

ಅವಧಿಯ ಪ್ರಮುಖರಾಗಿ ರಾಜು ಹಲಗೆಕರ ಆಗಮಿಸಿದ್ದರು. ಈರಯ್ಯಾ ಖೋತ ನಿರೂಪಿಸಿದರು.  ವಿನೋದ್ ಲಂಗೊಟಿ ಸ್ವಾಗತಿಸಿದರು.  ಗೀತಾ ಕೋಳಿ ವಂದಿಸಿದರು.

Home add -Advt

Related Articles

Back to top button