ಪರಮೇಶ್ವರ, ಜಾಲಪ್ಪ ಮನೆ, ಸಂಸ್ಥೆಗಳ ಮೇಲೆ 300ಕ್ಕೂ ಹೆಚ್ಚು ಅಧಿಕಾರಿಗಳ ದಾಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮತ್ತು ಮಾಜಿ ಸಚಿವ ಆಲ್.ಜಾಲಪ್ಪ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ಸಂಸ್ಥೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಬೆಳಗ್ಗೆ 4 ಗಂಟೆಗೆ ಪರಿಶೀಲನೆಗೆ ಹೊರಟ ಅಧಿಕಾರಿಗಳು ಪರಮೇಶ್ವರ ಅವರ ಬೆಂಗಳೂರು ಹಾಗೂ ತುಮಕೂರಿನ ಎಲ್ಲ ನಿವಾಸ ಹಾಗೂ ಸಂಬಂಧಿಸಿದ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೆಯೇ ಜಾಲಪ್ಪ ಅವರ ಬೆಂಗಳೂರು ಹಾಗೂ ದೊಡ್ಡಬಳ್ಳಾಪುರದ ನಿವಾಸಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳು 90ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯಲಾಗಿದೆ.

ಪರಮೇಶ್ವರ ಅರಿಗೆ ಸಂಬಂಧಿಸಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ಪರಿಶೀಲನೆ ನಡೆದಿದೆ. ಕಂಪ್ಯೂಟರ್, ಬ್ಯಾಂಕ್ ಲಾಕರ್ ಗಳು, ಮನೆಯಲ್ಲಿನ ಚಿನ್ನಾಭರಣ, ಹಣ, ಇನ್ನಿತರ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. ಪರಮೇಶ್ವರ ಅವರ ಮನೆಗೆ ಚಿನ್ನಾಭರಣ ಪರಿಶೀಲನೆಗೆ ಸಂಬಂಧಿಸಿದ ಮಶಿನ್ ತರಿಸಲಾಗಿದೆ.

ಪರಮೇಶ್ವರ ಅವರ ಮೂಲ ಮನೆಯಲ್ಲಿ ಸಹೋದರ ಶಿವಪ್ರಸಾದ ವಾಸವಾಗಿದ್ದು ಅಲ್ಲಿಗೆ ಕೂಡ ದಾಳಿ ಮಾಡಲಾಗಿದೆ. ಬೆಂಗಳೂರಿನಲ್ಲಿದ್ದ ಪರಮೇಶ್ವರ ಅವರನ್ನು ತುಮಕೂರಿಗೆ ಕರೆಸಲಾಗಿದೆ. ನಂತರ ಅವರ ವಿಚಾರಣೆ ಆರಂಭಿಸಲಾಗಿದ್ದು, ಇನ್ನೂ ಮುಂದುವರಿದಿದೆ.

ರಾಜಕೀಯ ದ್ವೇಷ ಆರೋಪ

ಪರಮೇಶ್ವರ ಹಾಗೂ ಜಾಲಪ್ಪ ನಿವಾಸದ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ, ಉಗ್ರಪ್ಪ, ಈಶ್ವರ ಖಂಡ್ರ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಪರಮೇಶ್ವರ ಮನೆ ಮೇಲೆ ದಾಳಿ ನಡೆದಿರುವುದು ಐಟಿ ಸಂಸ್ಥೆಯನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಂಡಿರುವುದನ್ನು ತೋರಿಸುತ್ತದೆ ಎಂದು ಅವರು ವಪ್ರತಿಕ್ರಿಯಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button