Belagavi NewsBelgaum News

*ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.

Home add -Advt

ಕೆರೂರು ಗ್ರಾಮದ ಬಾಳುಮಾಮಾ ಜಾತ್ರೆಯಲ್ಲಿ ಸಾವಿರಾರು ಜನ ನಿನ್ನೆ(ಮೇ.29) ಪ್ರಸಾದ ಸೇವಿಸಿದ್ದರು. ಸಂಜೆ ಊಟ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿದೆ. ತಿಳಿಯದೇ ಮಧ್ಯಾಹ್ನ ಉಳಿದಿದ್ದ ಅಡುಗೆಯನ್ನು 200 ಕ್ಕೂ ಹೆಚ್ಚು ಜನ ರಾತ್ರಿಯೂ ಸೇವಿಸಿದ್ದರು ಎನ್ನಲಾಗಿದೆ.

ಘಟನೆ ಹಿನ್ನೆಲೆಯಲ್ಲಿ 30 ಜನರಿಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ, 10 ಜನರಿಗೆ ಕೆರೂರಿನ ಅಂಗವಾಡಿಯಲ್ಲಿ ಹಾಗೂ 10 ಜನರಿಗೆ ಯಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯಕೀಯ ತಂಡ ಗ್ರಾಮದಲ್ಲೇ ಬೀಡು ಬಿಟ್ಟಿದೆ.

Related Articles

Back to top button