Kannada NewsKarnataka NewsLatest

ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿಗೆ ಟಿಕೆಟ್ ನೀಡಲಾಗಿದೆ.

ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿಗೇ ಟಿಕೆಟ್ ನೀಡಲಾಗಿದೆ.

ಅಮಿತ್ ಶಾ ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಇನ್ನು ಮುಂದೆ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೂ ತಮ್ಮ ಸೊಸೆ (ಸುರೇಶ ಅಂಗಡಿ ಪುತ್ರಿ) ಶೃದ್ಧಾ ಶೆಟ್ಟರ್ ಗೆ ಟಿಕೆಟ್ ಕೊಡಿಸಲು ಜಗದೀಶ್ ಶೆಟ್ಟರ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.

ಮಂಗಲಾ ಅಂಗಡಿ ಹೆಸರು ಬಂದಿತ್ತಾದರೂ ಅವರು ತಮ್ಮ ಬದಲಿಗೆ ಮಗಳಿಗೆ ಟಿಕೆಟ್ ನೀಡುವಂತೆ ಕೋರಿದ್ದರು. ಇದನ್ನು ಪ್ರಗತಿವಾಹಿನಿ ನಿನ್ನ ಪ್ರಕಟಿಸಿತ್ತು.

Home add -Advt

ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಹೆಸರು ಫೈನಲ್ ಆಗುತ್ತಿದ್ದಂತೆ ಬಿಜೆಪಿ ಗೇಮ್ ಪ್ಲ್ಯಾನ್ ಬದಲಾಯಿಸಿದೆ. ಅಲ್ಲಿಯವರೆಗೂ ಬೇರೆ ಬೇರೆ ಹೆಸರಿತ್ತು.  ಈಗ ಬಿಜೆಪಿಗೆ ಅನುಕಂಪದ ಅಸ್ತ್ರ ಬಳಸುವುದು ಅನಿವಾರ್ಯವೆನಿಸಿದೆ.

ಸಂಪೂರ್ಣ ಪಟ್ಟಿ ಇಲ್ಲಿದೆ –

List of BJP candidate for Bye-election to the LA of AP, Kar, Jhar, MP, Mizo, Odi, Raj Election 2021 on 25.03.2021

Related Articles

Back to top button