Kannada NewsKarnataka News

6 ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಬೆಳಗಾವಿ ಅನಗೋಳ ಸುಭಾಷ್ ಗಲ್ಲಿಯ ಮನೆ ನಂ.೨೨೭ರ  ನಿವಾಸಿಯಾದ ಶೈಲೇಶ ಸುಭಾಷ್ ರಾವಣ್ಣವರ ಇವರ ಹೆಂಡತಿ ಮತ್ತು 6 ವರ್ಷದ ಮಗು ನಾಪತ್ತೆಯಾಗಿದ್ದಾರೆ.

26 ವರ್ಷದ ಸಾವಿತ್ರಿ ಶೈಲೇಶ್ ರಾವಣ್ಣವರ್  ತಮ್ಮ ೬ ವರ್ಷದ ಮಗನಾದ ಶ್ಲೋಕ ಶೈಲೇಶ ರಾವಣ್ಣವರ್ ನನ್ನು ಕರೆದುಕೊಂದು ಡಿಸೆಂಬರ್‌ ೨೧ ರಂದು ಸಂಜೆ ೫ ಗಂಟೆಗೆ ಸಂಬಂಧಿಕರ ಬರ್ತಡೇ ಇದೆ ಎಂದು ಹೇಳಿ ಹೋದವರು ಕಾಣೆಯಾಗಿದ್ದಾರೆ.

Home add -Advt

ಸಂಬಂಧಿಗಳನ್ನು ವಿಚಾರಿಸಿದರೂ ಯಾವುದೇ ಸುಳಿವು ಇಲ್ಲದ ಕಾರಣ  ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿಯ ವಯಸ್ಸು ೨೬, ೫.೩ ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ತಿಳಿ ನೀಲಿ ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.

ಮಗುವಿನ ವಯಸ್ಸು ೦೬, ೩.೪ ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ಕೆಂಪು ಬಣ್ಣದ ಶರ್ಟ ಮತ್ತು ಪ್ಯಾಂಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.

ಸುಳಿವು ಸಿಕ್ಕಲ್ಲಿ ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : ೦೮೩೧-೨೪೦೫೨೩೬, ಪೊಲೀಸ್ ಇನ್ಸಪೆಕ್ಟರ ತಿಲಕವಾಡಿ ೯೪೮೦೮೦೪೦೫೨, ಪಿ.ಎಸ್.ಐ(ಕಾ ಮತ್ತು ಸು) ತಿಲಕವಾಡಿ ೯೪೮೦೮೦೪೧೧೨ ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಯ ಇಬ್ಬರು ಯುವತಿಯರು ನಾಪತ್ತೆ

ಬೆಳಗಾವಿ: ಮತ್ತೋರ್ವ ವಿದ್ಯಾರ್ಥಿನಿ ನಾಪತ್ತೆ

Related Articles

Back to top button