Kannada NewsKarnataka NewsLatest

*ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾದ ತಾಯಿ-ಮಗಳು: ಸಾವಿನ ಸುತ್ತ ಅನುಮಾನದ ಹುತ್ತ*

ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ತಾಯಿ ಹಾಗೂ ಮಗಳು ಶವವಾಗಿ ಪತ್ತೆಯಾಗಿದ್ದು, ಘಟನೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಲಾವಣ್ಯ (28) ಹಾಗೂ ಮಗಳು ಅಕ್ಷತಾ (8) ಮೃತ ದುರ್ದೈವಿಗಳು.

ಲಾವಣ್ಯ ಹಾಗೂ ಆಕೆಯ ಮಗಳ ಸಾವಿನ ಬಗ್ಗೆ ಲಾವಣ್ಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪತಿ ಸಂಪತ್ ಇಬ್ಬರನ್ನು ಕೊಲೆಗೈದು ಕೃಷಿ ಹೊಂಡದಲ್ಲಿ ಹಾಕಿರುವ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಸೂರ್ಯನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button