Kannada NewsKarnataka NewsLatest

*ಐಪಿಎಲ್ ಟಿಕೆಟ್ ಬ್ಲಾಕ್ ನಲ್ಲಿ ಮಾರಾಟ: ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಬಂದು 10 ಆರೋಪಿಗಳನ್ನು ಬಂಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬ್ಲಾಕ್ ನಲ್ಲಿ ಹೆಚ್ಚಿನ ದರಕ್ಕೆ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಆರೋಪಿಗಳನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಆರ್ ಸಿಬಿ, ಜಿಟಿ ಪಂದ್ಯದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಏಳು ಎಫ್ ಐ ಆರ್ ದಾಖಲಾಗಿತ್ತು.

Home add -Advt

ಮಫ್ತಿಯಲ್ಲಿ ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 19 ಐಪಿಎಲ್ ಟಿಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕೆ ಎಸ್ ಸಿ ಎ ಸದಸ್ಯರಿಗೆ ನೀಡಿದ್ದ ಕಾಂಪ್ಲಿಮೆಂಟರಿ ಟಿಕೆಟ್ ಗಳೇ ಮಾರಾಟವಾಗಿದ್ದವು. ಕಾಂಪ್ಲಿಮೆಂಟರಿ ಟಿಕೆಟ್ ಮೇಲೆ ಹಣ ನಮೂದು ಅಥವಾ ಸೊನ್ನೆ ಎಂದು ಬರೆದಿರುತ್ತದೆ. ತಮ್ಮಲ್ಲಿರುವ ಟಿಕೆಟ್ ಮೌಲ್ಯದ ಅರಿವಿಲ್ಲದೇ ಆರೋಪಿಗಳು ಈ ಟೆಕೆಟ್ ಗಳನ್ನು ಮಾರಾಟ ಮಾಡಿದ್ದರು.

P3 ಸ್ಟ್ಯಾಂಡ್ ನ 30-40 ಸಾವಿರ ಬೆಲೆಯ ಟಿಕೆಟ್ 8-10 ಸಾವಿರಕ್ಕೆ ಮಾರಾಟ ಮಾಡಿದ್ದರು. ಇನ್ನೊಂದೆಡೆ 4-5 ಸಾವಿರ ಮೌಲ್ಯದ ಟಿಕೆಟ್ ನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಿ ಸ್ಟೇಡಿಯಂ ಬಳಿ ಹೆಚ್ಚಿನ ಬೆಲೆ ಮಾರಾಟ ಮಾಡಿದ್ದರು.

ಸದ್ಯ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್, ಶಶಿಕುಮಾರ್, ಸೋನು, ಕುಮಾರ್, ಶ್ರೀಕಾಂತ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.

Related Articles

Back to top button