Belagavi NewsBelgaum NewsCrimeKannada NewsKarnataka News

*ದನ ಸಾಗಿಸುತ್ತಿದ ವಾಹನಕ್ಕೆ ಡಿಸೈಲ್ ಟ್ಯಾಂಕರ್ ಡಿಕ್ಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ನಗರದ ಧಾರವಾಡ ಬೈಪಾಸ್ ರಸ್ತೆಯ ಹಳೆಯ ದನದ ಮಾರುಕಟ್ಟೆ ಸಮೀಪ ದನಗಳನ್ನು ಸಾಗಿಸುತ್ತಿದ್ದ ಬೊಲೆರೋ ಡಿಸೈಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದ ಕಲ್ಲಪ್ಪ ವಡ್ಡರಗಾಂವಿ ಅವರಿಗೆ ಸೇರಿದ ಬೊಲೆರೋ ವಾಹನವು ಮೂಡಲಗಿಯಿಂದ ದನಗಳನ್ನು ತುಂಬಿಕೊಂಡು ಬೈಲಹೊಂಗಲದ ಹಳೆಯ ದನದ ಮಾರುಕಟ್ಟೆ ಕಡೆ ಸಾಗುತ್ತಿತ್ತು. ಇದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಡಿಸೈಲ್ ಟ್ಯಾಂಕರ್‌ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ

ಡಿಕ್ಕಿಯ ಪರಿಣಾಮ ಬೊಲೆರೋದಲ್ಲಿದ್ದ ನಾಲ್ಕು ದನಗಳು ಮತ್ತು ಒಬ್ಬ ವ್ಯಕ್ತಿ ಸಿಲುಕಿಕೊಂಡಿದ್ದು, ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದರು. ಗಾಯಗೊಂಡ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button