Karnataka News

*ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆಗೈದಿರುವ ಘಟನೆ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.

ಆಯೇಷಾ ಕೊಲೆಯಾಗಿರುವ ಮಹಿಳೆ. ಶೋಫಿಯಾನ್ ತಾಯಿಯನ್ನೇ ಕೊಂದ ಮಗ. ಆರೋಪಿ ಶೋಫಿಯಾನ್ ಮಾನಸಿಕ ಅಸ್ವಸ್ತನಾಗಿದ್ದು ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಆಯೇಷಾ ತನ್ನ ಇಬ್ಬರು ಮಕ್ಕಳೊಂದಿಗೆ ಪುಟ್ಟೇನಹಳ್ಳಿ ಮನೆಯಲ್ಲಿ ವಾಸವಾಗಿದ್ದರು.

ಹಿರಿಯ ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಿರಿಯ ಮಗ ಶೋಫಿಯಾನ್ ತನ್ನ ತಾಯಿಗೆ ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಶೋಫಿಯಾನ್ ಗೆ ತಾಯಿ ಆಯೇಷಾ ಕೆಲಸಕ್ಕೆ ಹೋಗುವಂತೆ ಆಗಾಗ ಬುದ್ಧಿ ಹೇಳುತ್ತಿದ್ದರು. ಇದಕ್ಕೆ ಶೋಫಿಯಾನ್ ಕೋಪಗೊಂಡು ಜಗಳವಾಡುತ್ತಿದ್ದ ಎನ್ನಲಾಗಿದೆ. ಈಗಲೂ ಬುದ್ಧಿ ಹೇಳಿದ್ದಕ್ಕೇ ಶೋಫಿಯಾನ್ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

Home add -Advt

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button