
ಪ್ರಗತಿವಾಹಿನಿ ಸುದ್ದಿ; ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ತುಮಕೂರಿನ ತಿರುಮಲಪಾಳ್ಯದಲ್ಲಿ ನಡೆದಿದೆ.
ತಾಯಿ ಹೇಮಲತಾ (34) ಹಾಗೂ ಪುತ್ರಿಯರಾದ ಮಾನಸಾ (6), ಪೂರ್ವಿಕಾ (3) ಮೃತರು.
ಬಾವಿ ದಡದಲ್ಲಿದ್ದ ಮರದಲ್ಲಿ ಸೀಬೆಹಣ್ಣು ಕೀಳಲೆಂದು ಹೋಗಿ ಇಬ್ಬರು ಮಕ್ಕಳು ಕಾಲು ಜಾರಿ ಪಕ್ಕದ ಬಾವಿಗೆ ಬಿದ್ದಿದ್ದಾರೆ. ಮಕ್ಕಳನ್ನು ರಕ್ಷಿಸಲೆಂದು ತಾಯಿ ಹೇಮಲತಾ ಕೂಡ ಬಾವಿಗೆ ಹಾರಿದ್ದಾರೆ. ಮೂವರಿಗೂ ಬಾವಿಯಿಂದ ಮೇಲೆ ಬರಲಾಗದೇ ಸಾವನ್ನಪ್ಪಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸದೇ ಸಿಎಂ ಆದ ಇತಿಹಾಸವಿದೆ ಎಂದ ಡಿಕೆಶಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ