Latest

ಚುನಾವಣೆಯಲ್ಲಿ ಸ್ಪರ್ಧಿಸದೇ ಸಿಎಂ ಆದ ಇತಿಹಾಸವಿದೆ ಎಂದ ಡಿಕೆಶಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ರೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಚ್ಚರಿ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸದೇ ಸಿಎಂ ಆದ ಇತಿಹಾಸವಿದೆ ಎಂದು ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಸಕರಾದವರೇ ಸಿಎಂ ಆಗಬೇಕು ಅಥವಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರೇ ಸಿಎಂ ಆಗಬೇಕು ಎಂದಿಲ್ಲ. ಯಾರುಬೇಕಾದರೂ ಸಿಎಂ ಆಗಬಹುದು. ಚುನಾವಣೆಯಲ್ಲಿ ಗೆಲ್ಲದವರೂ ಸಿಎಂ ಆದ ನಿದರ್ಶನಗಳಿವೆ ಎಂದು ಹೇಳಿದರು.

ದೇವರಾಜ ಅರಸು ಚುನಾವಣೆಯಲ್ಲಿ ಗೆದ್ದೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಅವರು ಶಾಸಕರೂ ಆಗಿರಲಿಲ್ಲ, ಆದರೂ ಅವರೆಲ್ಲ ಮುಖ್ಯಮಂತ್ರಿಯಾಗಿರಲಿಲ್ಲವೇ? ಹಾಗಾಗಿ ಸಿಎಂ ಆಗಬೇಕು ಎಂದರೆ ಗೆದ್ದ ಅಭ್ಯರ್ಥಿಗಳೇ ಆಗಬೇಕು ಎಂದೇನೂ ಇಲ್ಲ ಎಂದರು.

5G ಫೋನ್ ಘೋಷಿಸಿದ ರಿಲಯನ್ಸ್

ನನ್ನನ್ನು ಹಾಗೆ ಕರೆಯಬೇಡಿ; ಆ ಪದವೇ ಡೆಂಜರ್ ಎಂದ ಡಾ.ಜಿ. ಪರಮೇಶ್ವರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button