ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ ಅಭಿವೃದ್ದಿಗಾಗಿ ರಾಜ್ಯ/ಕೇಂದ್ರ ಸರ್ಕಾರಗಳ 50:50 ವೆಚ್ಚಕ್ಕೆ ಕ್ರಮ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ ಅಭಿವೃದ್ದಿಗಾಗಿ ರಾಜ್ಯ/ಕೇಂದ್ರಗಳ ಸಮ ಸಹಭಾಗಿತ್ವದಲ್ಲಿ ಅಭಿವೃದ್ದಿಗೆ ಕ್ರಮ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡಕರಿ ಉತ್ತರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಬೈಪಾಸ್ ಅಥವಾ ರಿಂಗ್ ರಸ್ತೆಗಳ ನಿರ್ಮಾಣಕ್ಕಾಗಿ ಸರ್ಕಾರವು ಭೂಸ್ವಾಧೀನಕ್ಕೆ ಯೋಜಿಸುತ್ತಿದೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮಾನ್ಯ ಕೇಂದ್ರ ಸಚಿವರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಬೈಪಾಸ್ ಅಥವಾ ರಿಂಗ್ ರೋಡ್‌ಗಳ ನಿರ್ಮಾಣಕ್ಕಾಗಿ ಕೇವಲ ಭೂಸ್ವಾಧೀನಕ್ಕಾಗಿ ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸ್ ಮಾಡೆಲ್ ಅನ್ನು ಬಳಸಲಾಗುವುದಿಲ್ಲ. ಆದಾಗ್ಯೂ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ 18.3.2021ರ ಸುತ್ತೋಲೆಯ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ಮೌಲ್ಯ ಕ್ಯಾಪ್ಚರ್ ಫೈನಾನ್ಸ್ ಮಾದರಿಯ ಬಗ್ಗೆ ಆಯಾ ರಾಜ್ಯ ಸರ್ಕಾರ ಜೊತೆಗೆ ಯೋಜನೆಯ ವೆಚ್ಚವನ್ನು ಹಂಚಿಕೊಳ್ಳುವ ದೃಷ್ಟಿಯಿಂದ ನೀತಿಯನ್ನು ಹೊರಡಿಸಿದೆ.
ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಮಂಗಳೂರು-ಕುಮಟಾ, ತುಮಕೂರ-ಬೆಳಗಾವಿ ಮಧ್ಯದ ಬೈಪಾಸ/ರಿಂಗ ರಸ್ತೆಗಳಿಗಾಗಿ ವೆಚ್ಚವನ್ನು ಸಮ ಭಾಗಿತ್ವದಲ್ಲಿ(50:50) ವೆಚ್ಚ ಭರಿಸಲು ಒಪ್ಪಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದಕ್ಕೆ ಅನುಮೋದಿಸಿದ್ದು, ವಾಸ್ತವಿಕ ವೆಚ್ಚದ ಶೇ 50ರಷ್ಟನ್ನು ಪುನರ್‌ವಸತಿ ಮತ್ತು ಭೂ ಸ್ವಾಧೀನಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ರಸ್ತೆಗಳ ನಿರ್ಮಾಣದ ನಂತರ ಉತ್ಪತ್ತಿಯಾಗುವ ಆದಾಯವನ್ನು ಅಭಿವೃದ್ದಿ, ನಿರ್ವಹಣೆ, ಸಾಲದ ಮರುಪಾವತಿ, ಇತ್ಯಾದಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಹಾಗೂ ಟೋಲ್ ಅದಾಯವನ್ನು ಸಂಗ್ರಹಿಸಿದ ನಂತರ ರಾಜ್ಯಗಳಿಗೆ ಮೊತ್ತವನ್ನು ಮರುಪಾವತಿಸಲಾಗುವುದೆಂದು ತಿಳಿಸಲಾಗಿದೆ.
ಅಥಣಿ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ