ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಕರೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಮತಕ್ಷೇತ್ರದ ಯಕ್ಸಂಬಾ ಪಟ್ಟಣದಲ್ಲಿ ಪಟ್ಟಣ ಪಂಚಾಯತ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತಯಾಚನೆ ಮಾಡಿದರು.
ಯಕ್ಸಂಬಾ ಪಟ್ಟಣ ಪಂಚಾಯತ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷದ 17 ಅಭ್ಯರ್ಥಿಗಳ ಪರವಾಗಿ, ರವಿವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಭೆ ನಡೆಸಿ, ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ನಮ್ಮ ಅಭ್ಯರ್ಥಿಗಳು ರಸ್ತೆ ಅಭಿವ್ರದ್ದಿ ಕಾಮಗಾರಿಗಳು, ಭೀದಿ ದೀಪಗಳ ವ್ಯವಸ್ಥೆ, ನೀರಿನ ಸಂಪರ್ಕ, ಚರಂಡಿ ಕಾಮಗಾರಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಸಮುದಾಯ ಭವನ,ಸಾಂಸ್ಕೃತಿಕ ಭವನಗಳ ನಿರ್ಮಾಣ, ಪೈಪ್ ಲೈನ್ ಕಾಮಗಾರಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಜನರ ಮನೆ- ಮನ ತಲುಪುತ್ತಿವೆ. ಹೀಗಾಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲೂ ಜನರು ನಮಗೆ ಆರ್ಶೀವದಿಸಲಿದ್ದಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸರ್ವರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಲಾಯಿತು. ಜನಪರ ಕಾರ್ಯಗಳನ್ನೂ ಮನೆ ಮನೆಗೆ ತಲುಪಿಸಲು ಉತ್ತಮ ಅಭ್ಯರ್ಥಿಗಳ ಆಯ್ಕೆ ಅತ್ಯಗತ್ಯ. ಹೀಗಾಗಿ ಸದಾ ಜನರ ಹಿತಕ್ಕಾಗಿ ಶ್ರಮಿಸುವ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಅಭಿವ್ರದ್ದಿಗೆ ಸಹಕರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ, ಅನ್ವರ ದಾಡಿವಾಲೆ, ಸಂಜು ಪಾಟೀಲ, ಲಕ್ಷ್ಮಣ ಕಬಾಡೆ, ರಾಮಚಂದ್ರ ಬಾಕಳೆ, ಸುನೀಲ ಅಕ್ಕೋಳೆ, ಚಂದ್ರಕಾಂತ ಖೋತ, ಮಲ್ಲಯ್ಯ ಮಠಪತಿ, ರಾಜು ಬಾಕಳೆ, ದಯಾನಂದ ಕಾಡಾಪುರೆ, ರಣಜಿತ ರಾಯಜಾಧವ, ಪ್ರಮುಖ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಎಂಇಎಸ್ ಪುಂಡರ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ