Latest

ವಿಶ್ವದ ಖ್ಯಾತ ಗೂಡಾಚಾರ ಸಂಸ್ಥೆ ಸಿಐಎ ನಲ್ಲಿ ಮಹತ್ವದ ಹುದ್ದೆಗೇರಿದ ಭಾರತೀಯ ಮೂಲದ ನಂದ್

ಪ್ರಗತಿ ವಾಹಿನಿ ಸುದ್ದಿ ವಾಷಿಂಗ್ಟನ್ – 

ಅಮೇರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಭಾರತ ಮೂಲದ ನಂದ್ ಮೂಲ್‌ಚಂದಾನಿ ನೇಮಕಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಗೂಡಾಚಾರಿ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ವಿಶ್ವದ ಟಾಪ್ ಗೂಡಾಚಾರ ಸಂಸ್ಥೆಗಳಲ್ಲಿ ಒಂದಾಗಿರುವ ಸಿಐಎನಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಮೂಲದ ವ್ಯಕ್ತಿಯನ್ನು ನೇಮಕ ಮಾಡಿರುವುದು ಭಾರತಕ್ಕೆ ಹೆಮ್ಮೆ ತಂದಿದೆ.

ನಂದ್ ಮೂಲ್‌ಚಂದಾನಿ ತಮ್ಮ ಆರಂಭಿಕ ಹಂತದ ಶಿಕ್ಷಣವನ್ನು ದೆಹಲಿಯಲ್ಲಿ ಪೂರೈಸಿದ್ದಾರೆ. ದೆಹಲಿಯ ಬ್ಲ್ಯೂ ಬೆಲ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಅವರು ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಬಳಿಕ ಅಮೇರಿದ ಖ್ಯಾತ ವಿಶ್ವವಿದ್ಯಾಲಯಗಳಾದ ಸ್ಟ್ಯಾನ್‌ಫೋರ್ಡ್, ಕರ್ನಲ್, ಹಾರ್ವರ್ಡ್ ವಿವಿಗಳಲ್ಲಿ ಗಣಿತ, ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

Home add -Advt

ಅವರು ಅಮೇರಿಕದ ರಕ್ಷಣಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಳೆದ ೨೫ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

ಐಪಿಎಲ್‌ನಲ್ಲಿ ಅತೀ ವೇಗದ ಬೌಲ್ ಎಸೆದು ಹೊಸ ದಾಖಲೆ ಬರೆದ ಉಮ್ರಾನ್ ಮಲಿಕ್ ; ಆ ಬಾಲ್‌ನ ವೇಗ ಎಷ್ಟಿತ್ತು ಗೊತ್ತೆ ?

Related Articles

Back to top button