
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ’ಸೌಭಾಗ್ಯ’ ಯೋಜನೆಯಡಿಲ್ಲಿ ಬಡ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ” ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಗುರುವಾರ ಉತ್ತರಿಸಿದ್ದಾರೆ.
ಕೇಂದ್ರ ಸರ್ಕಾರವು ಸೌಭಾಗ್ಯ – ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆಯನ್ನು ಅಕ್ಟೋಬರ್ 2017 ರಂದು ಪ್ರಾರಂಭಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ಮತ್ತು ಎಲ್ಲಾ ಬಡವರಿಗೆ ಮತ್ತು ನಗರ ಪ್ರದೇಶಗಳಲ್ಲಿರುವ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಸಾರ್ವತ್ರಿಕ ಗೃಹ ವಿದ್ಯುದೀಕರಣವನ್ನು ಸಾಧಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ 31-3-2021 ರಂತೆ ಎಲ್ಲಾ ರಾಜ್ಯಗಳು 31-3-2019ಕ್ಕಿಂತ ಮೊದಲು ಗುರುತಿಸಲಾದ ಎಲ್ಲಾ ವಿದ್ಯತ್ ರಹಿತ ಮನೆಗಳ 100% ವಿದ್ಯುದೀಕರಣ ಒಟ್ಟು 2.817 ಕೋಟಿ ಮನೆಗಳಿಗೆ ವಿದ್ಯುತ್ ವವ್ಯಸ್ಥೆ ಮಾಡಲಾಗಿದೆ.
ಸೌಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಎದುರಿಸಿದ ಸವಾಲುಗಳು – ಪ್ರವೇಶಿಸಲಾಗದ ಮತ್ತು ದೂರದ ಪ್ರದೇಶಗಳಲ್ಲಿ ಚದುರಿನ ಮನೆಗಳು, ಗುಡ್ಡಗಾಡು ಪ್ರದೇಶ, ಪ್ರತಿಕೂಲ ಹವಾಮಾನ, ಹೆಡ್ ಲೋಡಿಂಗ್ ಮಾಡಲು ಹೆಲಿಕಾಪ್ಟರ್‌ಗಳು, ಬಿದಿರಿನ ಸೇತುವೆಗಳೂ ದೋಣಿಗಳ ಮೂಲಕ ವಸ್ತುಗಳ ಸಾಗಣಿಕೆ, ಎಡಪಂಥೀಯ ಉಗ್ರರ ಅಡೆತಡೆಗಳು, ಅರಣ್ಯ ತೆರವು.
ವಿದ್ಯುತ್ ಸಚಿವಾಲವು (ಎಮ್‌ಒಪಿ) ನಗರ ಪ್ರದೇಶಗಳಲ್ಲಿ ವಿದ್ಯುತ್ ಉಪಪ್ರಸರಣ ಮತ್ತು ವಿತರಣಾ ಜಾಲಗಳನ್ನು ಬಲಪಡಿಸಲು “ ಇಂಟಿಗ್ರೇಟೆಡ್ ಪವರ ಡೆವಲೆಪ್‌ಮೆಂಟ್ ಸ್ಕಿಮ್ (ಐಪಿಡಿಎಸ್)ನ್ನು ಆರಂಭಿಸಿತು.
ಈ ಯೋಜನೆಯನ್ನು ಎಲ್ಲಾ ಇಚ್ಚೆಯಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾಗಿ, ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ದೇವಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಶಿಕಲಾ ಜೊಲ್ಲೆ