*ಅಣ್ಣಸಾಹೇಬ ಜೊಲ್ಲೆ ಹುಟ್ಟುಹಬ್ಬ ಸಂಭ್ರಮ; ಜೋಡೆತ್ತಿನ ಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತು ಸ್ಪರ್ಧೆ*

ರಾಹುಲ್ ಅರ್ಗೆ, ಗಬ್ಬರ್ ಪ್ರೇಮಿ ಪ್ರಥಮ ಸ್ಥಾನ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೋರಗಾಂವ ಪಟ್ಟಣದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹುಟ್ಟು ಹಬ್ಬ ಪ್ರಯಕ್ತ ಜೋಡೆತ್ತಿನ ಗಾಡಿ ಶರ್ಯತ್ತು ಹಾಗೂ ಕುದುರೆ ಗಾಡಿ ಶರ್ಯತ್ತು ಕಾರ್ಯಕ್ರಮ ನಡೆಯಿತು.
ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಶಿವನಕವಾಡಿಯ ರಾಹುಲ್ ಅರ್ಗೆ ಅವರ ಗರಡಿ ಜೋಡೆತ್ತು ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ವೇಳೆ ಮಾಜಿ ಕಾರ್ಪೋರೇಟರ್ ಬಾಬಾಸಾಹೇಬ ಚೌಗುಲೆ ಕಾರ್ಯಕ್ರಮದ ಸ್ವಾಗತಭಾಷಣ ಮಾಡಿದರು. ಯುವ ಮುಖಂಡ, ಕಾರ್ಪೊರೇಟರ್ ಶರದ್ ಜಂಗ್ಟೆ ಮಾತನಾಡಿ, ಸಹಕಾರಿ ಮುಖಂಡರ ಜನ್ಮದಿನದ ನಿಮಿತ್ತ ತಾಲೂಕಿನಾದ್ಯಂತ ನಾನಾ ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಅಣ್ಣಾಸಾಹೇಬ ಜೊಲ್ಲೆ ಜನ್ಮದಿನಾಚರಣೆ ಹಾಗೂ ಅವರು ಮಾಡಿದ ಕಾರ್ಯವನ್ನು ಗುರುತಿಸಲು ಮಹಾ ಓಟವನ್ನು ಹಮ್ಮಿಕೊಳ್ಳಲಾಗಿದೆ. ಜೊಲ್ಲೆ ದಂಪತಿಗಳಿಂದಾಗಿಯೇ ಇಂದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಓಟದ ಫಲಿತಾಂಶ ಇಂತಿದೆ:
ಸಾಮಾನ್ಯ ಎತ್ತಿನ ಗಾಡಿ ಓಟದಲ್ಲಿ ರಾಹುಲ್ ರ್ಗೆ ಶಿವನಕವಾಡಿ ಪ್ರಥಮ ಸ್ಥಾಣ ಪಡೆದು 25 ಸಾವಿರ ರೂಪಾಯಿ ಬಹುಮಾನ ಗೆದ್ದರು. ಸಂಭಾಜಿ ಖಾರತ್ ಸಾಂಗಲಿ ದ್ವಿತೀಯ ಹಾಗೂ ಹೈದರ್ ಅಲಿ ಮುಜಾವರ ಹಟಕಣಂಗ್ಲೆ ತೃತೀಯ ಸ್ಥಾನ ಪಡೆದು ಕ್ರಮವಾಗಿ 15 ಸಾವಿರ ಆಹೂ 10 ಸಾವಿರ ರೂಪಾಯಿ ಪಡೆದರು.
ಸಾಮಾನ್ಯ ಕುದುರೆ ಗಾಡಿ ಓಟದಲ್ಲಿ ಗಬ್ಬರ್ ಪ್ರೇಮಿ ಬೋರಗಾಂವ ಪ್ರಥಮ, ಲಗ್ನಮನ್ನ ಬ್ಯಾಕೂಡ್ ದ್ವಿತೀಯ ಹಾಗೂ ಸೋನ್ಯಾ ಪ್ರೇಮಿ ಬೋರಗಾಂವವಾಡಿಯ ಕುದುರೆ ಗಾಡಿ ತೃತೀಯ ಸ್ಥಾನ ಪಡೆಯಿತು. ಅವರಿಗೆ ಕ್ರಮವಾಗಿ 11 ಸಾವಿರ, 7 ಸಾವಿರ ಮತ್ತು 5 ಸಾವಿರ ರೂಪಾಯಿ ಬಹುಮಾನ ನೀಡಲಾಯಿತು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಅವರನ್ನು ಎಲ್ಲಾ ಬಿಜೆಪಿ ಕಾರ್ಯಕರ್ತರ ಪರವಾಗಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಗಳಾದ ಶರದ್ ಜಂಗ್ಟೆ, ದಾದಾಸಾಹೇಬ ಭಾದುಳೆ, ಸುನೀಲ್ ನಂಗ್ರೆ-ಪಾಟೀಲ್, ಶಿವಾಜಿ ಬೋರೆ, ಬಾಬಾಸಾಹೇಬ್ ಚೌಗುಲೆ, ಜಮೀಲ್ ಅತ್ತಾರ್, ದಾದಾ ಪೂಜಾರಿ, ಅಜಿತ್ ತೇರ್ದಾಳೆ, ಫಿರೋಜ್ ಅಫ್ರಾಜ್, ಭರತ್ ಜಂಗ್ತೆ, ರಮೇಶ ಮಾಲ್ಗಾವೆ, ಭೀಮಾ ಚೌಗುಲೆ, ಮಹಿಪತಿ ಖೋಗುಲೆ, ಮಹಿಪತಿ ಖೋಟಕ, ರಿತು ಪಾಟೀಲ್, ಶೇಸು ಐದ್ಮಲೆ, ವಿಷ್ಣು ತೋಡಕರ, ನಿಖಿಲ್ ಚಿಪ್ರೆ, ಶೀತಲ್ ಹವಲೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ