Kannada NewsLatest

*ಹರಿಪ್ರಿಯಾ ಎಕ್ಸ್ ಪ್ರೆಸ್ ರೈಲು ಉಗಾರಲ್ಲಿ ನಿಲುಗಡೆ* ಸಂಸದ ಅಣ್ಣಾ ಸಾಹೇಬ ಜೊಲ್ಲೆ ಪ್ರಯತ್ನ*

 

ಸಂಸದ ಅಣ್ಣಾ ಸಾಹೇಬ ಜೊಲ್ಲೆ ಪ್ರಯತ್ನ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಹರಿಪ್ರಿಯಾ ಎಕ್ಸ್ ಪ್ರೆಸ್ ರೈಲು ಮಾ. 5 ರಿಂದ ಉಗಾರಲ್ಲಿ ನಿಲುಗಡೆ ಮಾಡಲು ಆದೇಶ ಆಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಪ್ರಯಾಣಿಕರು ಈ ರೈಲಿನ ಉಪಯೋಗ ಮಾಡಿಕೊಳ್ಳಬೇಕು ಎಂದು ಸಂಸದರು ಕೋರಿದ್ದಾರೆ.

ಚಿಕ್ಕೋಡಿ, ರಾಯಬಾಗ, ಉಗಾರ ಖುರ್ದ ಸುತ್ತಮುತ್ತಲಿನ ಜನರಿಗೆ ಸಂಪರ್ಕ ಕಲ್ಪಿಸಲು ಬಹಳ ತೊಂದರೆಯಾಗುತ್ತಿದ್ದನ್ನು ಮನಗೊಂಡು ಚಿಕ್ಕೋಡಿ ಸಂಸದ ‘ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ಲೋಡ್ ರೈಲ್ವೆ ನಿಲ್ದಾನದಲ್ಲಿ ವೇಗದೂತ ಪ್ರಮುಖ ರೈಲುಗಳಾದ ಹುಬ್ಬಳ್ಳಿ-ದಾದರ ಎಕ್ಸ್‌ಪ್ರೆಸ್ (ನಂ. 17317/18) .ಹಾಗೂ ತಿರುಚಿರಾಪಲ್ಲ-ಶ್ರೀಗಂಗಾನಗರ ಎಕ್ಸಪ್ರೆಸ್‌ (ನಂ. 22497/98) ಮತ್ತು ಕಾಗವಾಡ ತಾಲೂಕಿನ ಉಗಾರುರ್ದ ರೈಲ್ವೆ ನಿಲ್ದಾನದಲ್ಲ ವೇಗದೂತ ಪ್ರಮುಖ ರೈಲುಗಳಾದ ತಿರುಪತಿ- ಕೊಲ್ದಾಪೂರ ಎಕ್ಸ್‌ಪ್ರೆಸ್‌ (ನಂ. 17415/16) ನಿಲ್ದಾಣಗಳಲ್ಲಿ ನಿಲುಗಡೆಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ, ಅಧಿಕಾರಿಗಳಗೆ ಎಕ್ಸ್‌ಪ್ರೆಸ್ ರೈಲುಗಳನ್ನು ನೀಲುಗಡೆ ಮಾಡಲು ಸೂಚಿಸಿದ್ದರು.

ಸೂಚನೆಯ ಮೇರೆಗೆ ಅಧಿಕಾರಿಗಳು, ಚಿಕ್ಕೋಡಿ, ರೋಡ್ ರೈಲ್ವೆ ನಿಲ್ದಾನದಲ್ಲ. ವೇಗದೂತ ರೈಲುಗಳಾದ ಹುಬ್ಬಳ್ಳಿ-ದಾದರ ಎಕ್ಸಪ್ರೆಸ್ (ನಂ. 17317/18) .ದಿನಾಂಕ: 05.03.2023 ರಿಂದ ಹಾಗೂ ತಿರುಚಿರಾಪಲ್ಲ- ಶ್ರೀಗಂಗಾನಗರ ಎಕ್ಸಪ್ರೆಸ್‌ (ನಂ. 22497/98) ದಿನಾಂಕ: 08.03.2022 / 04.03.2023 ರಿಂದ ಮತ್ತು ಉಗಾರಖುರ್ದ ರೈಲ್ವೆ ನಿಲ್ದಾನದಲ್ಲಿ ವೇಗದೂತ ರೈಲುಗಳಾದ ತಿರುಪತಿ- ಕೊಲ್ಲಾಪೂರ ಎಕ್ಸ್‌ಪ್ರೆಸ್ (ನಂ. 17415/16) ದಿನಾಂಕ: 05.03.2022 ರಿಂದ ವೇಗದೂತ ರೈಲುಗಳನ್ನು ನಿಲುಗಡೆ ಮಾಡಲು ಆದೇಶ ಹೊರಡಿಸಿದ್ದಾರೆ.

ಇದರಿಂದ ಈ ಭಾಗದ ಜನರಿಗೆ ತಿರುಪತಿ ದರ್ಶನಕ್ಕೆ ಹಾಗೂ ಬೆಳಗಾವಿ ಹೋಗಲು ಹಾಗೂ ಸಂಪರ್ಕ ಹೊಂದಲು ಬಹಳ ಅನುಕೂಲವಾಗಲಿದೆ ಮತ್ತು ಇದರ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ತಿಳಿಸಿದ್ದಾರೆ.

*ಹೆಂಡತಿ ಮಕ್ಕಳಿಗೆ ವಿಷವುಣಿಸಿ ಗಂಡ ಆತ್ಮಹತ್ಯೆ ಯತ್ನ; ಪತ್ನಿ, ಇಬ್ಬರು ಪುತ್ರಿಯರು ಸಾವು*

https://pragati.taskdun.com/wifetwo-childrendeathpoisendhusband-criticlebangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button