Belagavi NewsBelgaum NewsKarnataka NewsPolitics

*ರೈಲ್ವೆ ಮೇಲ್ಸೇತುವೆ ಪರಿಶೀಲನೆ ನಡೆಸಿದ ಸಂಸದ ಜಗದೀಶ ಶೆಟ್ಟರ್* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರು ನೀಡಿದ ದೂರುಗಳನ್ವಯ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಇವರು ಇಂದು ಬೆಳಗಾವಿ ನಗರದ ಟಿಳಕವಾಡಿ ಹತ್ತಿರವಿರುವ ರೇಲ್ವೆ ಗೇಟ್ ನಂ: 3 ಗೆ (ಎಲ್.ಸಿ ನಂ: 381) ಭೇಟಿ ನೀಡಿ ರೇಲ್ವೆ ಮೇಲ್ಸೇತುವೆಯಲ್ಲಿ ಹಾಳಾದ ರಸ್ತೆಯಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

ಅತೀಯಾಗಿ ಹಾಳದ ರಸ್ತೆಯನ್ನು ವೀಕ್ಷಿಸಿದ ಸಂಸದರು ಬೇಸರ ವ್ಯಕ್ತಪಡಿಸಿದರು.‌ ಒಂದು ವಾರದ ಅವಧಿಯಲ್ಲಿ ದುರಸ್ತಿಗೊಳಿಸುವ ಬಗ್ಗೆ ಎಲ್ಲ ಕ್ರಮವನ್ನು ಜರುಗಿಸಲು ಸ್ಥಳದಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆಯ ಬೆಳಗಾವಿ ಉಪ – ವಿಭಾಗದ ಸಹಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೋಳೆಕರ ಅವರಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದರು.

ಪ್ರಸ್ತಾಪಿತ ರಸ್ತೆಯು ನೈರುತ್ಯ ರೇಲ್ವೆ ಅಭಿಯಂತರರು ಈ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಿದ್ದು ಈಗಾಗಲೇ ಬೆಳಗಾವಿ ಉಪ – ವಿಭಾಗದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಗೊಂಡಿದೆ.

ರೇಲ್ವೆ ನೈರುತ್ಯ ವಲಯದ ಸಹಾಯಕ ಅಭಿಯಂತರರಾದ ಮಯನಾಕ ಅವರು ಹಾಜರಿದ್ದು ರೇಲ್ವೆ ಮೇಲ್ಸೇತುವೆಯ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು.

Home add -Advt

Related Articles

Back to top button