Belagavi NewsBelgaum NewsKannada NewsKarnataka NewsNationalPolitics

ಕಂಟೋನ್ಮೆಂಟ್ ಬೋರ್ಡ್ ಸಭೆಯಲ್ಲಿ ಗೊಂದಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕಂಟೋನ್ಮೆಂಟ್ ಬೋರ್ಡ್ ಕಚೇರಿಯಲ್ಲಿ ಜರುಗಿದ ಕಂಟೋನ್ಮೆಂಟ್ ಬೋರ್ಡ್‌ನ ವಿಶೇಷ ಸಭೆ ತೀವ್ರ ಗೊಂದಲಮಯವಾಗಿ ಸೂಕ್ತ ನಿರ್ಣಯವಿಲ್ಲದೆ ಅಂತ್ಯವಾಯಿತು.

ಸಂಸದ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಕಂಟೋನ್ಮೆಂಟ್ ಬೋರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕುಮಾರ್ ಉಪಸ್ಥಿತರಿದ್ದರು.

ಜನವಸತಿ ಪ್ರದೇಶಗಳನ್ನು ಮಹಾನಗರ ಪಾಲಿಕೆಗೆ ವಹಿಸುವ ಕುರಿತು ಸಭೆ ಕರೆಯಲಾಗಿತ್ತು. ಆದರೆ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಅಧಿಕಾರಿಗಳು ಮನ್ನಡೆ ನೀಡದೆ, ತಮಗೆ ಕೇಂದ್ರದಿಂದ ಬಂದಿರುವ ಸೂಚನೆಯನ್ನಷ್ಟೆ ಪಾಲಿಸುವುದಾಗಿ ಹೇಳಿದ್ದರಿಂದ ಸಭೆ ಗೊಂದಲಕ್ಕೊಳಗಾಯಿತು.

ಹಾಗಾಗಿ ಯಾವುದೇ ಸ್ಪಷ್ಟ ನಿರ್ಣಯವಿಲ್ಲದೆ ಸಭೆಯನ್ನು ಅಂತ್ಯಗೊಲಿಸಲಾಯಿತು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button