Belagavi NewsBelgaum NewsKannada NewsKarnataka NewsNationalPolitics

*ರೈಲ್ವೆ ಅಧಿಕಾರಿಗಳ ಜೊತೆ ಮೀಟಿಂಗ್ ನಡೆಸಿದ ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಇಂದು ಸಭೆ ನಡೆಸಿದರು.

ಸಭೆಯಲ್ಲಿ ಬೆಳಗಾವಿ -ಕಿತ್ತೂರು -ಧಾರವಾಡ ನೂತನ ರೈಲ್ವೆ ಮಾರ್ಗದ ಕುರಿತು ಪ್ರಸ್ತುತ ಯೋಜನೆಯ ಪ್ರಗತಿ  ಕುರಿತು ವರದಿ ಪಡೆದು. ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದರು. 

ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿರುವ ಒಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಚರ್ಚಿಸಿ, ಪ್ರಸ್ತುತವಾಗಿ ಅನುಮತಿ ದೊರೆತಂತಹ ಪುಣೆ- ಬೆಳಗಾವಿ- ಧಾರವಾಡ ಒಂದೇ ಭಾರತ ರೈಲಿನ ಮಾದರಿಯಲ್ಲಿ ಬೆಂಗಳೂರು- ಧಾರವಾಡ ಒಂದೇ ಭಾರತ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಬಗ್ಗೆ ಯಾವುದೇ ತಾಂತ್ರಿಕ ದೋಷ ಇಲ್ಲದಿರುವುದು ಕಂಡುಬಂದಿದ್ದರಿಂದ ಶೀಘ್ರವಾಗಿ ಬೆಳಗಾವಿಯವರೆಗೆ ಬಂದೇ ಭಾರತ ರೈಲನ್ನು ವಿಸ್ತರಿಸುವ ಬಗ್ಗೆ ಆಗ್ರಹಿಸಿದರು. 

ಸವದತ್ತಿ ಹತ್ತಿರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿ ವರದಿಯನ್ನು ತಯಾರಿಸುವಂತೆ ತಿಳಿಸಿದರು. 

ಅದರಂತೆ ಸಮೀಕ್ಷೆ ಮುಗಿದಿರುವಂತಹ ಬೆಳಗಾವಿಯಿಂದ ಸಾವಂತವಾಡಿಯವರೆಗೂ ಸಹ ನೂತನ ಕೊಂಕಣ ರೈಲ್ವೆ ಸಂಪರ್ಕ, ಹಾಗೂ ಬೆಳಗಾವಿ ಕೊಲ್ಲಾಪುರ್ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ಸೂಚಿಸಿದರು.

ಬೆಳಗಾವಿ – ಮಿರಜ್ – ಬೆಳಗಾವಿ ನಡುವೆ ಪ್ಯಾಸೆಂಜರ್ ರೈಲು ಸೇವೆಯು ಈ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು ಈ ಸೇವೆಯನ್ನು ಇನ್ನು ಹೆಚ್ಚಿನ ಕಾಲದವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದುವರಿಸುವಂತೆ ಸೂಚಿಸಿದರು. 

ಹುಬ್ಬಳ್ಳಿಯಿಂದ ಕೊಚ್ಚಿವೆಲ್ಲಿ ವರೆಗೆ ಈಗಾಗಲೇ ಸಂಚರಿಸುತ್ತಿರುವ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವಂತೆ ಆಗ್ರಹಿಸಿದರು. ಅದರಂತೆ ಮೈಸೂರ್ – ಅಜ್ಮೀರ್ ಎಕ್ಸ್ಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆಯು ಮತ್ತು ಬೆಳಗಾವಿ -ಪಂಡರಾಪುರ, ಹುಬ್ಬಳ್ಳಿ-ಬೆಳಗಾವಿ -ಶಿರಡಿ -ಕೊಪರ್ಗಾವ್, ಬೆಳಗಾವಿ – ಜೋಧ್ಪುರ್, ಬೆಳಗಾವಿ -ಮುಂಬೈ, ನೂತನ ರೈಲು ಸಂಪರ್ಕ ಕಲ್ಪಿಸಲು ಆಗ್ರಹಿಸಿದರು.

ಪ್ರಧಾನಮಂತ್ರಿಯವರ ಅಮೃತ ಭಾರತ ಸ್ಟೇಷನ್ ಯೋಜನೆಯಲ್ಲಿ ಘಟಪ್ರಭಾ ಮತ್ತು ಗೋಕಾಕ್ ರೋಡ್ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು. ಬೆಳಗಾವಿ ಹತ್ತಿರದ ದೇಸೂರು ರೈಲ್ವೆ ನಿಲ್ದಾಣದಲ್ಲಿ ನಾಲ್ಕು ರೈಲ್ವೆ ಫಿಟ್ ಲೈನ್ ನಿರ್ಮಿಸುವ ಬಗ್ಗೆ ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button