Kannada NewsKarnataka NewsLatest

ಟೈಲರ್ ಗಳಿಗೆ ವಿಶೇಷ ನೆರವಿನ ಪ್ಯಾಕೇಜ್: ಶಾಸಕರಿಬ್ಬರ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಿಂದಾಗಿ ಸಮಸ್ಯೆ ಎದುರಿಸುತ್ತಿರುವ ಟೈಲರ್ ಗಳಿಗೂ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಇಲ್ಲಿಯ ಟೈಲರ್ ಅಸೋಸಿಯೇಶನ್ ಪದಾಧಿಕಾರಿಗಳು ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮಹಾವೀರ ಭವನದಲ್ಲಿ 25ಕ್ಕೂ ಹೆಚ್ಚು ಟೈಲರ್ಸ ಪದಾಧಿಕಾರಿಗಳು ಸೇರಿದ್ದರು. ಕರೋನಾ ಸಂದರ್ಭದಲ್ಲಿ ಆದ ತೊಂದರೆಯಿಂದಾಗಿ ಈಗ ಕೆಲಸ ಇಲ್ಲದೇ ಅಂಗಡಿ ಬಾಡಿಗೆ ಕೊಡಲು ಆಗದ ಸ್ಥಿತಿ ಉಂಟಾಗಿದೆ. ಕೆಲಸ ಮಾಡುವವರಿಗೆ ಸಂಬಳ ಕೊಡಲು ಆಗುತ್ತಿಲ್ಲ.  ಪ್ರತಿ ನಿತ್ಯ ದುಡಿದೇ ಜೀವನ ಸಾಗಿಸುವ  ಟೈಲರ್ಸಗಳು ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಟೈಲರ್ಸ ಅಸೋಸಿಯೇಷನ್  ರಾಜ್ಯ  ಪದಾಧಿಕಾರಿ ಕೃಷ್ಣ ಭಟ್ ವಿವರಿಸಿದರು.
   ಬೆಳಗಾವಿ ಜಿಲ್ಲೆಯ ಒಟ್ಟು ಟೈಲರ್ಸಗಳ ಪಟ್ಟಿ ಮಾಡಿ, ಆದ ತೊಂದರೆ, ಹಾನಿ  ಎಲ್ಲಾ ಲಿಖಿತ ಮನವಿಯನ್ನು  ಮುಖ್ಯಮಂತ್ರಿಗಳ  ಹೆಸರಿನಲ್ಲಿ  ಕೊಡುವಂತೆ, ಎಲ್ಲಾ  ಶಾಸಕರ ಸಹಕಾರ ಪಡೆದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಇಬ್ಬರೂ ಶಾಸಕರು ಭರವಸೆ ನೀಡಿದರು.
 ಹರಿ ಸರೋದೆ, ನಾರಾಯಣ ಜವಲಕರ, ಸುರೇಶ ಪಿಶೆ, ಅಮೂಲ ಬೇದ್ರೇ, ಶಿವಾನಂದ ಕೋಪರ್ಡೆ,ಸುವರ್ಣ ಕಟಾವಕರ ಮುಂತಾದವರು ಇದ್ದರು.

Related Articles

Back to top button