ಯೂ ಟ್ಯೂಬ್‍ನ ಸೆಕ್ಸ್ ಜಾಹೀರಾತು ಪರೀಕ್ಷೆ ತಯಾರಿಗೆ ಅಡ್ಡಿಯಾಯಿತೆಂದು ಈ ವಿದ್ಯಾರ್ಥಿ ಮಾಡಿದ್ದೇನು ಗೊತ್ತೆ ?
ಪ್ರಗತಿ ವಾಹಿನಿ ಸುದ್ದಿ, ನವದೆಹಲಿ:
ಯೂಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತು ಪರೀಕ್ಷೆಯ ತಯಾರಿಗೆ ಅಡ್ಡಿಯಾಯಿತು ಎಂದು ಆರೋಪಿಸಿ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಯೂಟ್ಯೂಬ್‍ನಿಂದ 75 ಲಕ್ಷ ಪರಿಹಾರ ಕೋರಿದ್ದಾನೆ.
ಮಧ್ಯಪ್ರದೇಶದ ಆನಂದ ಕಿಶೋರ ಚೌಧರಿ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ. ಈತ ಪೊಲೀಸ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಪರೀಕ್ಷೆಗೆ ತಯಾರಿ ನಡೆಸಿದ್ದ. ಆದರೆ ಯೂ ಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತಿನಿಂದ ತನಗೆ ಓದಲು ಸಾಧ್ಯವಾಗಿಲ್ಲ ಎಂಬುದು ಈ ವಿದ್ಯಾರ್ಥಿಯ ಆರೋಪ.
ಆದರೆ ಈತನ ಆರೋಪವನ್ನು ತಳ್ಳಿ ಹಾಕಿರುವ ಸುಪ್ರಿಂ ಕೋರ್ಟ್‍ನ ನ್ಯಾಯಾಧೀಶರಾದ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟಿಸ್ ಅಭಯ್ ಎಸ್ ಓಕಾ ಅವರಿದ್ದ ಪೀಠ ಜಾಹೀರಾತು ಇಷ್ಟವಾಗದಿದ್ದರೆ ಅದನ್ನು ನೋಡುವ ಅಗತ್ಯವಿರಲಿಲ್ಲ, ಇಂಥಹ ಕ್ಷುಲ್ಲಕ ದೂರುಗಳನ್ನು ತಂದು ಕೋರ್ಟಿನ ಸಮಯ ಹಾಳು ಮಾಡಬೇಡಿ ಎಂದು ಛೀಮಾರಿ ಹಾಕಿದೆ. ವಿದ್ಯಾರ್ಥಿಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದಂಡದ ಹಣವನ್ನು ಸುಪ್ರಿಂ ಕೋರ್ಟಿನ ಧ್ಯಾನ ಕೇಂದ್ರಕ್ಕೆ ನೀಡುವಂತೆ ಪೀಠ ಸೂಚಿಸಿದೆ. ಈ ವೇಳೆ ಆನಂದ ಕಿಶೋರ ಚೌದರಿ ತಾನು ನಿರೋದ್ಯೋಗಿ ಎಂದು ಬೇಡಿಕೊಳ್ಳಲಾಗಿ, ನಾವು ದಂಡದ ಹಣ ವಸೂಲಿ ಮಾಡುತ್ತೇವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
*ಕಾರವಾರ ಬಾಲಕನಿಗೆ ವಿಚಿತ್ರ ಕಾಯಿಲೆ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ