Kannada NewsKarnataka NewsLatest

MP ಟಿಕೆಟ್: ಅಮರನಾಥ ಜಾರಕಿಹೊಳಿ ಹೇಳಿಕೆ

ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಗುವ ಮನಸ್ಸು ನನಗಿಲ್ಲ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಸ್ಪರ್ಧಿಸುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದ ಹಿನ್ನನೆಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ನಿನ್ನೆ ಪ್ರಗತಿವಾಹಿನಿಗೆ ಸ್ಪಷ್ಟೀಕರಣ ನೀಡಿದ್ದರು.
ಇದೀಗ ಕೆಎಂಎಫ್ ನಿರ್ದೇಶಕರೂ ಆಗಿರುವ ಅಮರ್ ನಾಥ್ ರಮೇಶ್ ಜಾರಕಿಹೊಳಿ ಕೂಡ ಹೇಳಿಕೆ ನೀಡಿದ್ದಾರೆ.
ಅವರ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ –
ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ.
ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ.  ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರು ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಈ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡುವ ಜವಾಬ್ದಾರಿ ನನ್ನಂಥಹಾ ಪ್ರತಿಯೊಬ್ಬ ಕಾರ್ಯಕರ್ತನ‌ ಮೇಲಿದೆ.
ಸಾಮಾಜಿಕ‌ ಜಾಲತಾಣಗಳಲ್ಲಿ ನನ್ನ ಬಗ್ಗೆ ಟ್ರೋಲ್ ಆಗುತ್ತಿರುವ ವಿಷಯಗಳನ್ನು ಗಮನಿಸಿದ್ದೇನೆ.
ನನ್ನ ಸ್ನೇಹಿತರೂ, ಆಪ್ತರು ಮತ್ತು ಕಾರ್ಯಕರ್ತರ ಮನದಾಳವನ್ನು ಅರಿತಿದ್ದೇನೆ.
ರಾಜಕೀಯವಾಗಿ ಬೆಳೆಯಲು ನನಗೆ ಬೇಕಾದಷ್ಟು ಸಮಯವಿದೆ.
ದಿವಂಗತ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ.
ಮತ್ತು ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಗುವ ಮನಸ್ಸು ನನಗಿಲ್ಲ.
ನಾನು ಎಲ್ಲಾ‌ ಕಾರ್ಯಕರ್ತರಂತೆ ಟೊಂಕ ಕಟ್ಟಿ‌ ನಿಂತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್‌ದಯಾಳ್ ಉಪಾಧ್ಯಾಯರಂಥಹಾ ರಾಷ್ಟ್ರ‌ಭಕ್ತರು ಸ್ಥಾಪಿಸಿದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ನಾನು ಎಂದು‌ ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ.
ಕಾರ್ಯಕರ್ತರೆಲ್ಲಾ ಒಟ್ಟಾಗಿ‌ ಕೆಲಸ‌ ಮಾಡೋಣ ; ಪ್ರಧಾನಿ‌ ಮೋದಿಯವರಿಗೆ ಇನ್ನಷ್ಟು ಶಕ್ತಿ ತುಂಬೋಣ.
ಈ ಕೆಳಗಿನ ಲಿಂಕ್ ಒತ್ತಿ ಸಂಬಂಧಿಸಿದ ಸುದ್ದಿ ಓದಿ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button