ಎಂಪಿ ಟ್ರೋಫಿ ಕಬ್ಬಡಿ ಗ್ರ್ಯಾಂಡ್ ಫಿನಾಲೆ, ಚಾಂಪಿಯನ್ಸಗಳಾಗಿ ಹೊರಹೊಮ್ಮಿದ ಚಿಂಚಲಿ ತಂಡಗಳು
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹೆಸರಿನಲ್ಲಿ ನಡೆದ ಎಂ.ಪಿ.ಟ್ರೋಫಿಯ ಕಬ್ಬಡಿ ಫೈನಲ್ ಪಂದ್ಯಾವಳಲ್ಲಿ ಗ್ರ್ಯಾಂಡ ಫಿನಾಲೆಯಲ್ಲಿ ಮಹಿಳಾ ವಿಭಾಗದಲ್ಲಿ ಮಹಾಕಾಲಿ ಚಿಂಚಲಿಯ ಹಾಗೂ ಪುರುಷ ವಿಭಾಗದಲ್ಲಿ ಅಕಾಡೆಮಿ ಚಿಂಚಲಿ ತಂಡಗಳು ಪ್ರಥಮ ಸ್ಥಾನ ಪಡೆದು ಎಂ.ಪಿ.ಟ್ರೋಫಿಯ ಚಾಂಪಿಯನ್ಸಗಳಾಗಿ ಹೊರಹೊಮ್ಮಿದವು.
ನಿನ್ನೆ ರಾತ್ರಿ ನಡೆದ ಫೈನಲ್ ಪಂದ್ಯಾವಳಿಗೆ ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆಯವರು ಚಾಲನೆ ನೀಡಿದರು. ಮಹಿಳಾ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಜಯಮಹಾಕಾಲಿ ಚಿಂಚಲಿ ಹಾಗೂ ಅಭಾಜಿ ಫೌಂಡೇಶನ್ ಭೀರಡಿ ನಡೆದ ಫೈನಲ್ ಪಂದ್ಯದಲ್ಲಿ ಜಯಮಹಾಕಾಲಿ ಚಿಂಚಲಿ ತಂಡವು ಅಭಾಜಿ ಫೌಂಡೇಶನ್ ಭೀರಡಿ ತಂಡವನ್ನು 14 ಅಂಕಗಳ ಅಂತರದಿಂದ ಮಣಿಸಿ ಚಿಂಚಲಿ ತಂಡವು ಪ್ರಥಮ ಸ್ಥಾನ ಪಡೆದು 51 ಸಾವಿರ ನಗದು ಟ್ರೋಫಿ ತನ್ನದಾಗಿಸಿಕೊಂಡಿತು. ಅಭಾಜಿ ಫೌಂಡೇಶನ್ ತಂಡವು ಎರಡನೇ ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ 31 ಸಾವಿರ ನಗದು ಟ್ರೋಫಿ ನೀಡಲಾಯಿತು.ಮುಗಳಖೋಡದ ಸಿದ್ದರಾಮೇಶ್ವರ ತಂಡವು 3 ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ 15 ಸಾವಿರ ನಗದು ಟ್ರೋಫಿ ನೀಡಿ ಗೌರವಿಸಲಾಯಿತು.
ಇನ್ನೂ ಪುರುಷ ಫೈನಲ್ ಪಂದ್ಯದಲ್ಲಿ ಅಕಾಡೆಮಿ ಚಿಂಚಲಿ ಹಾಗೂ ನ್ಯೂ ಸ್ಪೋರ್ಟ್ಸ್ ಮೇಖಳಿ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಅಕಾಡೆಮಿ ಚಿಂಚಲಿ ತಂಡವು ಮೇಖಲಿ ತಂಡವನ್ನು 10 ಅಂಕಗಳ ಅಂತರದಿಂದ ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡರು.ಪ್ರಥಮ ಸ್ಥಾನ ಪಡೆದ ಅಕಾಡೆಮಿ ಚಿಂಚಲಿ ತಂಡಕ್ಕೆ 51 ಸಾವಿರ ನಗದು ಟ್ರೋಫಿಯನ್ನು ನೀಡಲಾಯಿತು. ಎರಡನೇ ಸ್ಥಾನ ಪಡೆದುಕೊಂಡ ನ್ಯೂ ಸ್ಪೋಟ್ಸ ಮೇಖಳಿ ತಂಡಕ್ಕೆ 31 ಸಾವಿರ ನಗದು ಟ್ರೋಫಿ ಹಾಗೂ ಮೂರನೆಯ ಸ್ಥಾನ ಪಡೆದುಕೊಂಡ ಜೈ ಹನುಮಾನ ಶಿಂಧಿಹಟ್ಟಿ ತಂಡಕ್ಕೆ 15 ಸಾವಿರ ನಗದು ಹಾಗೂ ಅಂತಿಮವಾಗಿ ನಾಲ್ಕನೆಯ ಸ್ಥಾನ ಪಡೆದ ಓಂ ಬಸವ ಸ್ಪೋರ್ಟ್ಸ್ ಕ್ಲಬ್ ಯರಗಟ್ಟಿ ತಂಡ ಪಡೆದುಕೊಂಡಿತು.ಈ 15 ಸಾವಿರ ನಗದು ಟ್ರೋಫಿ ನೀಡಿ ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ನಮ್ಮ ದೇಶದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ.ನಮ್ಮ ಭಾರತ ಕ್ರೀಡೆ,ಸಂಸ್ಕ್ರತಿ,ಸಂಸ್ಕಾರ ಬಿಟ್ಟು ಕೊಟ್ಟಿಲ್ಲ ಎಂದರು.ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವದು ನಮ್ಮ ಜೊಲ್ಲೆ ಗ್ರುಪ್ ನ ಉದ್ದೇಶವಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಖಡಕಲಾಟ ದ ಶಿವಬಸವ ಸ್ವಾಮೀಜಿ,ಆಶಾಜ್ಯೋತಿ ಬುಧ್ದಿ ಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ ಹಾಲಸಿಧ್ದನಾಥ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ವಿಶ್ವನಾಥ ಕಮತೆ,ದುಂಡಪ್ಪ ಭೆಂಡವಾಡೆ, ಸಿದ್ರಾಮ ಗಡದೆ, ರವಿ ಹಂಜಿ,ಸಂಜಯ ಪಾಟೀಲ, ಕರ್ನಾಟಕ ರಾಜ್ಯ ಕಬ್ಬಡಿ ಅಸೋಸಿಯೇಷನ್ ರೇಫರಿ ಬೋರ್ಡನ ಉ.ಕ ಕನವೇರಿಯಾದ ಎಮ್.ಕೆ.ಶಿರಗುಪ್ಪೆ, ವಿಜಯ ರಾವುತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ