Latest

ಕಾಂಗ್ರೆಸ್ ನಲ್ಲೇ ಇರ್ತೀನಿ ಅಂದ್ರು, ರಾಜಿನಾಮೆ ವಾಪಸ್ ಬಗ್ಗೆ ಅಸ್ಪಷ್ಟತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ರಾಜಿನಾಮೆ ನೀಡಿದ್ದ ವಸತಿ ಸಚಿವ ಎಂಟಿಬಿ ನಾಗರಾಜ ತಾವು ಕಾಂಗ್ರೆಸ್ ನಲ್ಲೇ ಇರುವುದಾಗಿ ಹೇಳಿದರಾದರೂ ರಾಜಿನಾಮೆ ವಾಪಸ್ ಬಗ್ಗೆ ಖಚಿತವಾಗಿ ಹೇಳಿಲ್ಲ. ಅವರ ಹೇಳಿಕೆ ಗೊಂದಲದಿಂದ ಕೂಡಿತ್ತು.

ಮೈತ್ರಿ ಪಕ್ಷಗಳ ಘಟಾನುಘಟಿಗಳ ಸರ್ಪಗಾವಲಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪದೇ ಪದೆ ಕಾಂಗ್ರೆಸ್ ನಲ್ಲೇ ಉಳಿಯಲು ನಿರ್ಧರಿಸಿದ್ದೇನೆ ಎಂದು ಪುನರುಚ್ಚರಿಸಿದರು.

ಸಿದ್ದರಾಮಯ್ಯ ನಿವಾಸದ ಬಳಿ ಅವರು ಮಾತನಾಡುವಾಗ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ ಮೊದಲಾದವರು ಸುತ್ತುವರಿದಿದ್ದರು.

Home add -Advt

ರಾಜಿನಾಮೆ ವಾಪಸ್ ಪಡೀತೀರಾ ಎಂದು ಎಷ್ಟು ಬಾರಿ ಕೇಳಿದರೂ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದಷ್ಟೆ ಹೇಳಿದರು.

ಅಂತಿಮವಾಗಿ ತೀರಾ ಒತ್ತಡ ಹೇರಿದಾಗ, ನಾಳೆ ಸುಧಾಕರ ಜೊತೆ ಮಾತನಾಡಿ ರಾಜಿನಾಮೆ ವಾಪಸ್ ಪಡೆಯುತ್ತೇವೆ ಎಂದರು.

ಸುಧಾಕರ ಒಪ್ಪದಿದ್ದರೆ ನಾನೊಬ್ಬನೇ ವಾಪಸ್ ಬಂದು ಏನು ಮಾಡಲಿ ಎಂದೂ, ಮುಖಂಡರೆಲ್ಲರ ನಿರ್ಗಮನದ ನಂತರ ಪತ್ರಕರ್ತರಿಗೆ ಪ್ರಶ್ನಿಸಿದರು.

ತೀರಾ ಒತ್ತಡದಿಂದ ಈ ಹೇಳಿಕೆ ನೀಡಿರುವಂತಿತ್ತು ಅವರ ಬಾಡಿ ಲ್ಯಾಂಗ್ವೇಜ್.

Related Articles

Back to top button