Kannada NewsKarnataka NewsNationalPolitics

*ಇಂದು ಮುಡಾ ಪ್ರಕರಣದ ವಿಚಾರಣೆ*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಸಿಎಂ ಪರವಾಗಿ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದು, ಮಧ್ಯಾಹ್ನ 3.30ಕ್ಕೆ ವಿಚಾರಣೆ ಸಮಯ ನಿಗದಿಯಾಗಿದೆ. ಎ.ಜಿ. ಅವರ ವಾದ ಮಂಡನೆ ಮುಗಿದ ಬಳಿಕ ತಮಗೆ ಮರು ವಾದ ಮಂಡನೆಗೆ ಸೆ. 12ರಂದು ಅವಕಾಶ ನೀಡಬೇಕು ಎಂದು ಸಿಎಂ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಫ್ಟಿ ಈಗಾಗಲೇ ಕೋರಿದ್ದಾರೆ.

ಇಲ್ಲಿಯ ವರೆಗೆ ಸಿಎಂ ಪರ ಅಭಿಷೇಕ್ ಮನು ಸಿಂಧ್ರಪ್ರೊ ರವಿವರ್ಮ ಕುಮಾರ್ ಪ್ರಾಥಮಿಕ ವಾದಗಳನ್ನು ಮಂಡಿಸಿದ್ದಾರೆ. ರಾಜ್ಯಪಾಲರ ಪರ ಸಾಲಿಸಿಟ‌ರ್ ಜನರಲ್ ತುಷಾ‌ರ್ ಮೆಹ್ರಾ ಪ್ರಾಥಮಿಕ ವಾದ ಪೂರ್ಣಗೊಳಿಸಿದ್ದಾರೆ. ದೂರುದಾರರ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್, ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಕೆ.ಜಿ. ರಾಘವನ್, ರಂಗನಾಥ್ ರೆಡ್ಡಿ ತಮ್ಮ ವಾದಗಳನ್ನು ಪೂರ್ಣಗೊಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button