Kannada NewsKarnataka News
*ಮನೆಯಲ್ಲಿ ಸಿಲಿಂಡರ್ ಸ್ಪೋಟ: ನಾಲ್ವರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದಿದೆ.
ರವಿವಾರ ಬೆಳಗ್ಗೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದೆ. ಪರಿಣಾಮವಾಗಿ ಅಡುಗೆ ಮನೆಯಲ್ಲಿದ್ದ ಇಬ್ಬರು ಸೇರಿ ಬಾತ್ ರೂಮ್‌ನಲ್ಲಿ ಇದ್ದವರಿಗೆ ಗಂಭೀರ ಗಾಯಗಳಾಗಿವೆ. ಸಿದ್ದಲಿಂಗಯ್ಯ ಹಿರೆಮಠ (43), ಪತ್ನಿ ವಿಶಾಲಾ ಹಿರೆಮಠ (35), ಪುತ್ರ ಶ್ರಿಪಾದಯ್ಯ ಹಿರೆಮಠ 17, ಸಿದ್ದಲಿಂಗಯ್ಯ ಅವರ ತಮ್ಮನ ಹೆಂಡತಿ ನಿರ್ಮಲಾ ಹಿರೆಮಠಗೆ ಗಂಭೀರ ಗಾಯಗಳಾಗಿದ್ದು, ಗಾಯಗಳುಗಳನ್ನು ಧಾರವಾಡದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿಲಿಂಡರ್ ಸ್ಫೋಟದದಿಂದಾಗಿ ಮನೆಗೂ ಹಾನಿಯಾಗಿದೆ. ಗಾಯಾಳುಗಳಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




