Karnataka NewsPolitics

*ಸಿಎಂ ಸಿದ್ದರಾಮಯ್ಯ ಅರ್ಜಿ ಮತ್ತೆ ಮುಂದೂಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯಪೀಠ ಮತೆ ಮುಂದೂಡಿದೆ.

ನ್ಯಾ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇಂದು ಕೂಡ ನ್ಯಾಯಪೀಠ ಸುದೀರ್ಘ ವಾದ ಮಂಡನೆ ಆಲಿಸಿತು. ಇಂದು ಸಿಎಂ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದರು.

ಬಳಿಕ ನ್ಯಾ.ನಾಗಪ್ರಸನ್ನ, ಪ್ರಕರನದ ಅರ್ಜಿ ವಿಚಾರಣೆಯನ್ನು ಸೆ.12ರಂದು ಪೂರ್ಣಗೊಳಿಸೋಣ. ಸದ್ಯ ಅರ್ಜಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗುವುದು ಎಂದು ಅರ್ಜಿ ವಿಚಾರಣೆ ಮುಂದೂಡಿದರು.

ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್ ವಾದ ಮಂಡನೆ

ಮಣೀಂದರ್ ಸಿಂಗ್ ವಾದಿಸದ ವಿಚಾರ ಮಾತ್ರ ಪ್ರಸ್ತಾಪಿಸಿ – ಜಡ್ಜ್

ಭ್ರಷ್ಟಾಚಾರ ಕಾಯಿದೆ 17A ಕುರಿತು ವಾದ

ಅನುಮತಿ ಇಲ್ಲದೆ ಪೊಲೀಸ್ ಅಧಿಕಾರಿ ತನಿಖೆ ಆರಂಭಿಸಲು ಸಾಧ್ಯವಿಲ್ಲ – ಜಡ್ಜ್

ಅತ್ಯಂತ ಅಗತ್ಯವಾಗಿರೋದ್ರಿಂದ ಸ್ನೇಹಮಯಿ ಕೃಷ್ಣ ಅನುಮತಿ ಕೋರಿದ್ದಾರೆ..

ಸೆಕ್ಷನ್ 7 ಸಿ ಯನ್ನು ಓದಲು ಬಯಸುತ್ತೇನೆ – ಕೆ.ಜಿ.ರಾಘವನ್

ಅನಗತ್ಯ ಲಾಭ, ಅನುಕೂಲ ಪಡೆಯುವುದು ಕೂಡಾ ಕಾಯ್ದೆಯ ವ್ಯಾಪ್ತಿಯಲ್ಲಿದೆ

ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ ವಾದ
ಈ ಪ್ರಕರಣದಲ್ಲಿ ತನಿಖೆಯ ನಡೆಯುವ ಅಗತ್ಯವಿದೆ..

ಅಪರಾಧ ಮಾಡಲು ಪಬ್ಲಿಕ್ ಸರ್ವೆಂಟ್ ಗೆ ಒತ್ತಡ ಹಾಕುವುದೂ ಅಪರಾಧ..

ಒಂದು ಲಾಭ ಪಡೆಯಲು ಯಾವುದೇ ಹುದ್ದೆಯಲ್ಲಿ ಇರಬೇಕೆಂದಿಲ್ಲ..

ಮತ್ತೊಮ್ಮ ಪಬ್ಲಿಕ್ ಸರ್ವೆಂಟ್ ಗೆ ವೈಯಕ್ತಿಕ ಪ್ರಭಾವ ಹಾಕುವುದೂ ಕೂಡ ಅಪರಾಧ.. ರಾಘವನ್..

ಅನುಮಾನ ಇರೋದ್ರಿಂದ ತನಿಖೆ ಅಗತ್ಯ ಇದೆ

P.c act section 7 ಅಡಿ ಲಾಭ ಪಡೆದಿರೋದ್ರಿಂದ ತನಿಖೆ ಪಬ್ಲಿಕ್ ಸರ್ವೆಂಟ್ ಅಗತ್ಯ ಇದೆ..

ಯಾವುದೇ ಲಾಭ ಪಡೆದಿದ್ರೆ, ಲಾಭ ಪಡೆಯುವ ಪ್ರಯತ್ನ ಮಾಡಿದ್ರೂ ತನಿಖೆ ಅಗತ್ಯ ಇದೆ..

ಹೀಗಾಗಿ 17A ಅನುಮತಿ ಅಗತ್ಯ ವಾಗಿದೆ.
ಸ್ವಚ್ಛ ಸಾರ್ವಜನಿಕ ಆಡಳಿತಕ್ಕಾಗಿ ತನಿಖೆ ಆಗುವ ಅಗತ್ಯ ಇದೆ..

ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಆರೋಪ ಇರೋದ್ರಿಂದ ತನಿಖೆ ಅಗತ್ಯ ಇದೆ..

ಕಾನೂನುಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅಪರಾಧ

ನಿಮ್ಮ ವಾದ ಸೆಲ್ಫ್ ಗೋಲ್ ಆಗಬಹುದು – ಜಡ್ಜ್

ಈ ಕೇಸಿಗೆ ಸಂಬಂಧಿಸಿದಂತೆ ಈ ಮಾತು ಹೇಳುತ್ತಿಲ್ಲ- ಕೆ.ಜಿ.ರಾಘವನ್
ಸಮಿತಿ ವಿಚಾರಣೆ ಯಿಂದ ನಿಮಗೆ ತೃಪ್ತಿ ಇಲ್ಳವೇ- ಜಡ್ಜ್

ಕಮಿಷನ್ ಎನ್ಕವೈರಿ ಯಿಂದ ನಮಗೆ ತೃಪ್ತಿ ಇಲ್ಲ – ಕೆ.ಜಿ.ರಾಘವನ್

ವಿಚಾರಣಾ ಸಮಿತಿಯಿಂದ ನಂಬಿಕೆ ಇಲ್ಲ..

17A ಅಡಿ ತನಿಖೆ ಆಗುವ ಅಗತ್ಯ ಇದೆ..

ಮುಂದೆ ಕ್ಲೀನ್ ಚಿಟ್ ಸಿಗಬಹುದು..

ಆದ್ರೆ ಈಗಲೇ ಯಾಕೆ ಎಲ್ಲವನೂ ತಡೆಯುವ ಯತ್ನ ಆಗುತ್ತಿದೆ..

ಕೋರ್ಟ್ ತನಿಖೆಗೆ ಅವಕಾಶ ನೀಡಬೇಕು…

2004-05 ವರೆಗೆ ಮತ್ತೆ ಡಿಸಿಎಂ ಆಗಿದ್ರು

ಕೆಸೆರೆ ಗ್ರಾಮದ ಸರ್ವೆ ನಂ.464 ಭೂಮಿಯ ಮಾಲೀಕ ನಿಂಗ

ಮಲ್ಳಯ್ಯ, ಮೈಲಾರಯ್ಯ, ದೇವರಾಜ್ ಮೂವರು ಮಕ್ಕಳು

ಮಲ್ಲಯ್ಯ, ದೇವರಾಜ್ ಇಬ್ಬರು ತಮ್ಮ ಅಧಿಕಾರವನ್ನ ಮೈಲಾರಯ್ಯಗೆ ಕೊಟ್ಟಿದ್ರು..

1996ರಿಂದ 1999 ರವರೆಗೆ ಸಿದ್ದರಾಮಯ್ಯ ಡಿಸಿಎಂ ಆಗಿದ್ರು..
2013-18 ಸಿಎಂ ಆಗಿದ್ರು..

1991 ರಲ್ಲಿ ಕರ್ನಾಟಕ ನಗರಾಭಿವೃದ್ಧಿ ಇಲಾಖೆ ಭೂಮಿಯನ್ನ ವಶಕ್ಕೆ ಪಡೆದು ಮಾಲೀಕರು ಎರಡು ಸೈಟ್ ಪಡೆಯಲು ಅಧಿಕಾರ ಇದೆ ಎಂದು ಹೇಳಿದೆ..

1997ರಲ್ಲಿ ಡಿನೋಟಿಫೈ ಗೆ ಮನವಿ ಮಾಡಲಾಗುತ್ತೆ..

ಆದ್ರೆ, 1998ರಲ್ಲಿ ಮಾಲೀಕರಿಗೆ ಪರಿಹಾರ ಆದೇಶ ಮಾಡಲಾಗಿದೆ, ಕಂದಾಯ ಖಜಾನೆಯಲ್ಳಿ ಹಣ ಠೇವಣಿ ಆಗುತ್ತದೆ

ದೇವನೂರು 3 ನೇ ಹಂತಕ್ಕೆ ಭೂಮಿ ವಶಕ್ಕೆ ಪಡೆದಿದೆ

ಮಾಲೀಕನೇ ಅಲ್ಲದ ದೇವರಾಜ್ ಡಿನೋಟಿಫೈ ಗೆ ಮನವಿ ಮಾಡುತ್ತಾನೆ..
ಸಾರ್ವಜನಿಕರಿಗೆ ಶುದ್ಧ ಆಡಳಿತದಲ್ಲಿ ನಂಬಿಕೆ ಬರಬೇಕು

ಇದು ಇಬ್ಬರ ನಡುವಿನ ವಿವಾದದ ವಿಷಯವಲ್ಲ

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿದೆ

ಮುಡಾ ಹಗರಣದ ಬಗ್ಗೆ ತನಿಖೆಗೆ ಆಯೋಗ ರಚನೆಯಾಗಿದೆ

ಆಯೋಗದ ರಚನೆ ಬಗ್ಗೆ ನಿಮಗೆ ಸಮಾಧಾನವಿದೆಯೇ – ಜಡ್ಜ್

ಇಲ್ಲ, ಆಯೋಗದ ವರದಿಗೆ ಯಾವುದೇ ಮಹತ್ವವಿಲ್ಲ ಅದು ಜಾರಿಯಾಗುವುದಿಲ್ಲ

ಆಯೋಗದ ವರದಿಯವರೆಗೆ ಈ ತನಿಖೆಗಳ ಅಗತ್ಯವಿದೆಯೇ ?

ನಾವು ಆಯೋಗದ ವರದಿ ಜಾರಿಯಾಗುವಂತೆ ಮಾಡಿದರೆ ?- ಜಡ್ಜ್
1998ರಲ್ಲಿ ಡಿನೋಟಿಫೈ ಮಾಡಿರುವುದು ಕೂಡ ಕಾನೂನು ಬಾಹಿರ..

ಮೂರು ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4800 ಚದರಡಿ ಪರಿಹಾರ.

1994 ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿತ್ತು: ವಕೀಲ ರಾಘವನ್

25/08/2004ದೇವನೂರು ಬಡವಾಣೆಗೆ ಸೇರಿದ ಜಾಗವನ್ನ ಮಲ್ಲಿಕಾರ್ಜುನ ಗೆ ಮಾರಾಟ ಮಾಡಲಾಗುತ್ತೆ..

ಡಿಸಿಯೇ ಜಾಗ ಪರಿಶೀಲನೆ ಮಾಡಿ ಭೂಪರಿವರ್ತನೆ ಮಾಡಲಾಗಿದೆ ಎಂದು ಆದೇಶ ಇದೆ..

ಮಲ್ಲಿಕಾರ್ಜುನ ಸ್ವಾಮಿ 2005ರಲ್ಲಿ ಸ್ಥಳ ಪರಿಶೀಲನೆ ಮಾಡಿ ಪರಿವರ್ತನೆ ಆಗಿದೆ

ಅಲ್ಲದೆ, ಈ ಜಾಗದ ಸ್ವಾಧೀನದಲ್ಲಿ ಇರುತ್ತದೆ ಎಂದು ದಾಖಲೆಗಳು ಇರುತ್ತವೆ..
ಮಲ್ಲಿಕಾರ್ಜುನ ಸ್ವಾಮಿ ಪಾರ್ವತಿ ಅವರಿಗೆ ದಾನ ಮಾಡಲಾಗಿದೆ..

23/06/2015 ಬದಲಿ ಸೈಟ್ ಗೆ ಮನವಿ ಮಾಡಲಾಗಿದೆ..

ಸಾಮನ್ಯ ಜನ ಮಾಡಿದ್ರೆ ಈ ರೀತಿ ಅದೇಶ ಆಗುತ್ತಾ? ರಾಘವನ್

ಬೇರೆ ಜನರು ಈ ರೀತಿ ಮನವಿ ಮಾಡಿಲ್ವಾ.? ಆದೇಶ ಮಾಡಿಲ್ವ? ಜಡ್ಜ್..

50:50 ಅನುಪಾತದಲ್ಲಿ ಪಾರ್ವತಿ ಅವರಿಗೆ ಸೈಟ್ ಕೊಡಲು ಅವಕಾಶವೇ ಇಲ್ಲ – ರಾಘವನ್

ದೇವರಾಜ್ ಈ ಜಾಗದ ಮಾಲೀಕನೇ ಅಲ್ಲ..

ಹೇಗೆ ದೇವರಾಜ್ ಗೆ ಡಿನೋಟಿಫೈ ಆಗುತ್ತದೆ..?

ಮಲ್ಲಿಕಾರ್ಜುನ ಸ್ವಾಮಿ ಖರೀದಿ ಹೇಗೆ ಕಾನೂನು ಬದ್ಧ..?

ಮುಡಾ ತಮ್ಮ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಿರುವುದರಿಂದ 40;60 ಜಾಗ ನೀಡಲು ತಿಳಿಸಿತ್ತು

ಆದ್ರೆ ಪಾರ್ವತಿ ಅವರು ಒಪ್ಫದೇ ಇರೋದ್ರಿಂದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ..

10/11/2022ರಲ್ಲಿ ತೀರ್ಮಾನ ಮಾಡಲಾಗಿದೆ ಎಂದು ನಿರ್ಣಯ ಮಾಡಲಾಗಿತ್ತು

ಜಾಗ ಬಳಕೆ ವಿಚಾರದಲ್ಲಿ ಪ್ರಾಧಿಕಾರದಿಂದ ತಪ್ಫಾಗಿ ಬಳಕೆ ಮಾಡಿಕೊಂಡಿರೋದ್ರಿಂದ ಜಾಗ ನೀಡಲು ತೀರ್ಮಾನ ಮಾಡಲಾಗಿದೆ…

ಈ ಪ್ರಕರಣದಲ್ಲಿ ಪದೇ ಪದೇ ತಪ್ಫುಗಳನ್ನ ಮಾಡಿದ್ದಾರೆ…
:
ಜಮೀನು ಸ್ವಾಧೀನವಾಗಿ ಹಣ ಡೆಪಾಸಿಟ್ ಆದ ಮೇಲೆ ಬದಲಿ ನಿವೇಶನದ ಪ್ರಶ್ನೆಯಿಲ್ಲ

23.6.2014 ರಂದು ಬದಲಿ ಸಿಎಂ ಪತ್ನಿ ಅರ್ಜಿ ಸಲ್ಲಿಸುತ್ತಾರೆ

60 40 ಗೆ ಅರ್ಜಿ ಸಲ್ಲಿಸಬಹುದಾಗಿತ್ತೇ – ಜಡ್ಜ್

60 40 ಯಲ್ಲ ಒಂದು ಸೈಟೂ ಅರ್ಹತೆ ಇರಲಿಲ್ಲ

50 50 ಅಡಿ 14 ನಿವೇಶನ ಹಂಚುವ ನಿಯಮ ಆಗ ಇರಲಿಲ್ಲ – ರಾಘವನ್

12.01.2022ರಲ್ಲಿ 14 ಸೈಟ್ ಗಳ್ನ್ನ ಪಾರ್ವತಿ ಅವರಿಗೆ ನೀಡಲಾಗಿದೆ..

ಬೇರೆಯವರಿಗೂ ಇದೇ ವೇಳೆ ಸೈಟ್ ಗಳನ್ನ ಹಂಚಲಾಗಿದೆ.? ಜಡ್ಜ್

14.03.2023 ಬಳಿಕ ಯಾರಿಗೂ ಸೈಟ್ ಗಳ ಹಂಚಿಕೆ‌ ಮಾಡಿಲ್ಲ, ಎಲ್ಲಾ ಸ್ಟಾಪ್ ಆಗಿದೆ – ರಾಘವನ್

ಒಂದು ತಪ್ಪಾದರೆ ಒಕೆ, ಪದೇ ಪದೇ ತಪ್ಪಾದರೆ ದುರುದ್ದೇಶವಿದೆ ಎಂದರ್ಥ

1998ರಲ್ಲಿ 3.16 ಎಕರೆ ಗೆ 3.24 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿತ್ತು

ಆದರೆ ಸಿಎಂ ಪತ್ನಿ ಗೆ 3.24 ಲಕ್ಷ ರೂಪಾಯಿಯ ಪರಿಹಾರ ಕೊಡುತ್ತಿದ್ದೀರಾ?

14 ಸೈಟಿನ ಮೌಲ್ಯ ಎಷ್ಟಿದೆ, ಸುಣ್ಣಕ್ಕೆ ಬೆಣ್ಣೆಯ ಬೆಲೆ ನೀಡುತ್ತಿದ್ದೀರಾ.?

2017ರಿಂದ 2021ರ ವೇಳೆ ಯಾವುದೆ ಬೆಳವಣಿಗೆ

30.12.2021ರಂದು 13,281 ಚದುರ ಅಡಿ ಜಾಗ ನೀಡಲಾಗಿದೆ..

2022ರಲ್ಲಿ ಸೈಟ್ ಗಳನ್ನ ಪಡೆಯಲು 2017ರಲ್ಲಿಯೇ ಪ್ರಭಾವ ಬೀರಿದ್ದಾರೆ ಸಿದ್ದರಾಮಯ್ಯ

2004ರಲ್ಲಿ ಡಿಸಿಎಂ ಜೊತೆಗೆ ಮೈಸೂರು ಉಸ್ತುವಾರಿ ಸಚಿವರಾಗಿದ್ರು…

ಮೂಡಾ ವಿಚಾರಕ್ಕೆ ಉತ್ತತ ಮಟ್ಟದ ಏಕಸದಸ್ಯ ಸಮಿತಿ ರಚನೆ ಮಾಡಲಾಗಿದೆ..

ಮೇಲ್ನೋಟಕ್ಕೆ ಆರೋಪ ಇರೋದ್ರಿಂದ ಕ್ಯಾಬಿನೆಟ್ ವಿಚಾರಣೆಗೆ ತೀರ್ಮಾನ ಮಾಡಿದೆ..

ಹೀಗಾಗಿ ನ್ಯೂಟ್ರಲ್ ಏಜನ್ಸಿಯಿಂದ ತನಿಖೆ ಅಗತ್ಯ ಎಂದು ರಾಜ್ಯಪಾಲರಿಗೆ ಅನಿಸಿದೆ..

ಹೀಗಾಗಿಯೇ ಈ ಬಗ್ಗೆ ತನಿಖೆಯಾಗಬೇಕಾದ ಅಗತ್ಯವಿದೆ

1998 ರ ಭೂಸ್ವಾಧೀನಕ್ಕೆ 2015ರ ಅನ್ವಯಿಸಿದ್ದೀರಿ

ಮಾಲೀಕರೇ ಅಲ್ಲದವರಿಗೆ ಡಿನೋಟಿಫಿಕೇಷನ್ ಮಾಡಿದ್ದೀರಿ

ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದೀರಿ

ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು – ಕೆ.ಜಿ.ರಾಘವನ್

ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದೀರಿ

ಈ ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು
ಸಿಎಂ ಪತ್ನಿಗೆ ಬೇಕಾದಂತೆ ನಿಯಮಗಳನ್ನು ಬದಲಿಸಿಕೊಂಡಿದ್ದಾರೆ

2017 ರಲ್ಲಿ 50 50 ಕೊಡಲು ಸಮ್ಮತಿ ನಿರ್ಣಯ

ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು

ತಾವು ಸಿಎಂ ಗೆ ಲಿಂಕ್ ಹೇಳಿ ಎನ್ನುತ್ತಿದ್ದಿರಿ ಲಿಂಕ್ ಇದೆ – ಕೆ.ಜಿ.ರಾಘವನ್
ಮುಡಾ ಹಗರಣಗಳ ಸಂಬಂಧ ಸರ್ಕಾರ ಆಯೋಗ ರಚಿಸಿದೆ – ಕೆ.ಜಿ.ರಾಘವನ್

ಈ ಕೇಸಿಗೂ ಮುಡಾ ತನಿಖಾ ಆಯೋಗಕ್ಕೂ ಸಂಬಂಧವಿದೆಯೇ – ಜಡ್ಜ್

ಸಿಎಂ ಪತ್ನಿಯ ನಿವೇಶನ ಹಂಚಿಕೆ ಬಗ್ಗೆ ಆಯೋಗ ರಚಿಸಿಲ್ಲ

ಮುಡಾ ದ ಸಾಮಾನ್ಯ ಆಡಳಿತಾತ್ಮಕ ಕ್ರಮಗಳ ತನಿಖೆಗೆ ಆಯೋಗ ರಚಿಸಲಾಗಿದೆ.

ನ್ಯಾಯಮೂರ್ತಿ ಗಳ ಪ್ರಶ್ನೆಗೆ ಕೆ.ಜಿ.ರಾಘವನ್ ಪ್ರತಿಕ್ರಿಯೆ.
50 50 ಅಡಿ ಬೇರೆಯವರಿಗೂ ಜಮೀನು ಹಂಚಿಕೆ ಮಾಡಲಾಗಿದೆಯೇ – ಜಡ್ಜ್

ಬೇರೆಯವರಿಗೆ ಹಂಚಿಕೆ ಮಾಡಿದ ಬಗ್ಗೆ ತಿಳಿದಿಲ್ಲ

14.3.2023 ನಂತರ 50:50 ಅನುಪಾತದಲ್ಲಿ ಹಂಚಿಕೆಯಾಗಿಲ್ಲ
: ಕೆಲ ತೀರ್ಪು ಗಳನ್ನು ಉಲ್ಲೇಖಿಸುತ್ತಿರುವ ವಕೀಲ ಕೆ.ಜಿ.ರಾಘವನ್

ಮುಡಾ ಹಗರಣದ ಬಗ್ಗೆ ಖಾಸಗಿ ದೂರು ದಾಖಲಿಸಲಾಗಿದೆ

ರಾಜ್ಯಪಾಲರ ಅನುಮತಿಯ ಮಾನ್ಯತೆ ಬಗ್ಗೆ ವಿಚಾರಣಾ ನ್ಯಾಯಾಲಯ ಪರಿಶೀಲಿಸಬಹುದು

ರಾಘವನ್ ವಾದಕ್ಕೆ ನ್ಯಾ.ಎಂ.ನಾಗಪ್ರಸನ್ನ ಪ್ರತಿಕ್ರಿಯೆ

ರಾಜ್ಯಪಾಲರ ಅನುಮತಿ ಬಗ್ಗೆ ಸಾಂವಿಧಾನಿಕ ಕೋರ್ಟ್ ತೀರ್ಮಾನಿಸಬೇಕು

ಹೈಕೋರ್ಟ್ ಗೆ ರಾಜ್ಯಪಾಲರ ಆದೇಶದ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆ – ಜಡ್ಜ್

ಫ್ರಾಡ್ ಅಂಡ್ ‌ಮಿಸ್ಟೇಕ್ ಬಗ್ಗೆ ಉಲ್ಲೆಖಿಸುತ್ತಿರುವ ವಕೀಲರು..

ಫ್ರಾಡ್ ಯಾವಾಗಲು ಕಾಣದಂತೆ ನಡೆದಿರುತ್ತದೆ..

ರಾಘವನ್ ವಾದ ಮುಕ್ತಾಯ ವಾದ ಮಂಡನೆಗೆ ಒಂದು ವಾರ ಸಮಯ ಕೋರಿದ ಎಜಿ ಶಶಿಕಿರಣ್ ಶೆಟ್ಟಿ..

ವಿಚಾರಣಾ ಆಯೋಗಕ್ಕೆ ಯಾವುದೇ ಮಹತ್ವ ಇಲ್ಲ – ರಾಘವನ್

ಸಮಿತಿ ಕೇವಲ ಶಿಫಾರಸು ಮಾಡಬಹುದು – ಜಡ್ಜ್..

ಎಜಿ ವಾದ ಮಂಡನೆ ನಂತರ ವಾದ ಮಂಡಿಸುವುದಾಗಿ ತಿಳಿಸಿದ ಅಭಿಷೇಕ್ ಮನು ಸಿಂಘ್ವಿ…


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button