Kannada NewsKarnataka NewsLatest

ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ವಂಚನೆ ಮಾಡಿದ್ದ ಆರೋಪಿ ಅಂದರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೌಕರಿ ಕೊಡಿಸುವುದಾಗಿ ಯುವಕರಿಗೆ ನಂಬಿಸಿ ಹಣ ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯರನಾಳ ಗ್ರಾಮದ ರಾಜು ಶ್ರೀಮಂತ ಪಾಟೀಲ ಬಂಧಿತ.ಕುಳ್ಳೂರಿನ ಸಂಗಪ್ಪ ಭರಮಪ್ಪ ದಳವಾಯಿ, ಲೋಕಾಪುರದ ಜಗದೀಶ ಸೋಮಲಿಂಗಪ್ಪ ತಡಸಲೂರ,  ಈಶ್ವರ ಬಸವರಾಜ ವಗ್ಗಣ್ಣವರ, ಮಹೇಶ ಹಣಮಂತ ವಗ್ಗಣ್ಣವರ, ಮುಧೋಳದ ಸಂತೋಷ ಒಂಟಿ, ಮಂಜುನಾಥ ರಂಗಪ್ಪ ಮಳಲಿ, ರಾಮದುರ್ಗದ ಮೈಲಾರ ಬಸಪ್ಪ ಗಡ್ಡಿ, ಗೋಕಾಕದ ಸುರೇಶ ಸದಾಶಿವ ಕೋಟೆ, ಬಸವರಾಜ ಬೆಟಗೇರಿ ಎಂಬುವವರು ಮೋಸ ಹೋದವರು. 

ಆರೋಪಿ ರಾಜು ಪಾಟೀಲಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರ ಬಳಿ 6 ಲಕ್ಷ ರೂ. ನಂತೆ 67 ಲಕ್ಷ ರೂ. ಸಂಗ್ರಹಿಸಿ ಪಂಗನಾಮ ಹಾಕಿ ಕಳೆದ ಮಾರ್ಚ್ ತಿಂಗಳಿನಿಂದ ನಾಪತ್ತೆಯಾಗಿದ್ದ. ಇತ್ತ ಈತನ ವಿರುದ್ಧ ಯುವಕರು ಪೊಲೀಸರಿಗೆ ದೂರು ನೀಡಿದ್ದರು. 

ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ಪಿ.ವಿ,.ಸ್ನೇಹಾ ನೇತೃತ್ವದಲ್ಲಿ ಪಿಐ ಶ್ರೀನಿವಾಸ ಹಂಡಾ, ಲಕ್ಕಪ್ಪ ಜೋಡಟ್ಟಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದೆ.

Home add -Advt

ಭಾರತ -ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ Yellow Alert

Related Articles

Back to top button