Kannada NewsKarnataka NewsLatest

ಮುಕ್ತಾರ್ ಪಠಾಣ್ ಪುತ್ರ ಕೊರೋನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ಬೆಳಗಾವಿಯ ರಾಮತೀರ್ಥ ನಗರದ ನಿವಾಸಿಯಾದ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಖ್ತಾರಹುಸೇನ್  ಪಠಾಣ ಅವರ ಜೇಷ್ಠ ಪುತ್ರ ಇಮ್ರಾನಖಾನ್ ಪಠಾಣ (27 ವರ್ಷ) ಅವರು  ಇಂದು ಮುಂಜಾನೆ ಅಕಾಲಿಕ ಮರಣ ಹೊಂದಿದರು.
ಕಳೆದ ಎರಡು ವಾರಗಳಿಂದ ಕೊರೋನಾದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೂಲತಃ ಸವದತ್ತಿ ತಾಲೂಕಿನ ಮುನ್ನೋಳಿ ಗ್ರಾಮದವರಾದ  ಅವರು ಪತ್ನಿ ಹಾಗೂ ಎರಡು ವರ್ಷದ ಮಗನನ್ನು ಅಗಲಿದ್ದಾರೆ.
ಅವರು ದುಬೈಯಲ್ಲಿ ಕೆಲಸಕ್ಕೆ ಸೇರಿದ್ದು, ಸಧ್ಯವೇ ಅಲ್ಲಿಗೆ ತೆರಳುವವರಿದ್ದರು.

Related Articles

Back to top button