Kannada NewsKarnataka NewsNational

*ಮುಂಬೈ- ನ್ಯೂ ಯಾರ್ಕ್ ಏರ್ ಇಂಡಿಯಾ ವಿಮಾನಿಗೆ ಬಾಂಬ್ ಬೆದರಿಕೆ ಕರೆ*

ಪ್ರಗತಿವಾಹಿನಿ ಸುದ್ದಿ: ಇಂದು ಬೆಳ್ಳಂ ಬೆಳಗ್ಗೆ ಮುಂಬೈ ಹಾಗೂ ನ್ಯೂ ಯಾರ್ಕ್ ಸಿಟಿ ನಡುವೆ ಹೊರಟ್ಟಿದ ಏರ್ ಇಂಡಿಯಾ ವಿಮಾನಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ವಿಮಾನವನ್ನು ಸ್ಫೋಟಿಸುವದಾಗಿ ಕಿಡಿಗೇಡಿಗಳು ಸಂದೇಶ ರವಾನೆ ಮಾಡಿದ್ದಾರೆ.

ಮುಂಬೈ ಹಾಗೂ ನ್ಯೂ ಯಾರ್ಕ್ ಸಿಟಿ ನಡುವೆ ವಿಮಾನ ಹೊರಟಿತ್ತು. ಅಧಿಕಾರಿಗಳಿಗೆ ಬೆದರಿಕೆ ಕರೆ ಬಂದಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ದಿಲ್ಲಿಯ ಏರ್ಪೋರ್ಟ ನಲ್ಲಿ ಎಮರ್ಜೆನ್ಸಿ ಲ್ಯಾನ್ಸಿಂಗ್ ಮಾಡಲಾಗಿದೆ.

ಸದ್ಯ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಬಾಂಬ್ ಸ್ಫೋಟ ಮಾಡುವ ಕರೆ ಬಂದಾಗ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು. ಬದಲಿ ವಿಮಾನ ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳು ತೀರ್ಮಾನಿಸಿದ್ದು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ನೀಡಲಾಗಿದೆ.‌ ಬೆದರಿಕೆ ಕರೆ ಬಂದ ಈ ಮೇಲ್ ವಿಳಾಸ, ಫೋನ್ ನಂಬರ್, ಐಪಿ ಅಡ್ರೆಸ್ ಎಲ್ಲದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Home add -Advt

Related Articles

Back to top button