Latest

ಹಳಿ ಮೇಲೆ ಬಿದ್ದ ಮಗುವನ್ನು ಕ್ಷಣಾರ್ಧದಲ್ಲಿ ದೇವದೂತನಂತೆ ಬಂದು ರಕ್ಷಿಸಿದ ರೈಲ್ವೆ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ರೈಲ್ವೆ ಹಳಿ ಮೇಲೆ ಆಯತಪ್ಪಿ ಬಿದ್ದ ಮಗುವೊಂದನ್ನು ಎದುರಿನಿಂದ ವೇಗವಾಗಿ ಬರುತ್ತಿದ್ದ ರೈಲಿನಿಂದ ಕ್ಷಣಾರ್ಧದಲ್ಲಿ ರೈಲ್ವೆ ಸಿಬ್ಬಂದಿಯೋರ್ವ ರಕ್ಷಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ವಂಗನಿ ರೈಲು ನಿಲ್ದಾಣದ 2ನೇ ಪ್ಲಾಟ್ ಫಾರ್ಮ್ ನಲ್ಲಿ ಮಹಿಳೆ ಜೊತೆ ಮಗು ನಡೆದು ಹೋಗುತ್ತಿದ್ದಾಗ ಮಗು ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದೆ. ಎದುರುಗಡೆಯಿಂದ ಶರವೇಗದಲ್ಲಿ ಬರುತ್ತಿದ್ದ ರೈಲು… ಹಳಿ ಮೇಲೆ ಬಿದ್ದಿರುವ ತನ್ನ ಮಗು… ಮಹಿಳೆಗೆ ಏನು ಮಾಡಬೇಕೆಂದು ತೋಚದೇ ಕಂಗಾಲಾಗಿ ನಿಂತಿದ್ದಾಳೆ.

Home add -Advt

ಕ್ಷಣಾರ್ಧದಲ್ಲಿ ದೇವರಂತೆ ಬಂದ ರೈಲು ನಿಲ್ದಾಣದ ನೌಕರನೊಬ್ಬ ಮಗುವನ್ನು ಎತ್ತಿ ಪ್ಲಾಟ್ ಫಾರ್ಮ್ ಮೇಲೆ ಹಾಕಿ ತಕ್ಷಣ ತಾನೂ ಮೇಲೆ ಹತ್ತಿ ಬಂದಿದ್ದಾನೆ. ಮಗುವಿನ ಪ್ರಾಣ ರಕ್ಷಣೆ ಮಾಡಿದ ರೈಲ್ವೆ ನಿಲ್ದಾಣದ ಕೆಲಸಗಾರ ಮಯೂರ್ ಕಾರ್ಯಕ್ಕೆ ರೈಲ್ವೆ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಣಪಣಕಿಟ್ಟು ಮಗುವನ್ನು ರಕ್ಷಿಸಿದ ಸಿಬ್ಬಂದಿಯ ಧೈರ್ಯವನ್ನು ಕಂಡು ರೈಲ್ವೆ ಇಲಾಖೆ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದೆ.

Related Articles

Back to top button