Kannada NewsLatestNational

*ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ*

ಪ್ರಗತಿವಾಹಿನಿ ಸುದ್ದಿ: ಖಾರ್ಗರ್ ಅರಣ್ಯ ಪ್ರದೇಶದಲ್ಲಿ 19 ವರ್ಷದ ಯುವತಿ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಒಂದಾದ ಮೇಲೊಂದರಂತೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ನವಿ ಮುಂಬೈನ 19 ವರ್ಷದ ಯುವತಿ ವೈಷ್ಣವಿ ಮನೋಹರ್ ಕಾಲೇಜಿಗೆ ಹೋಗಿ ಬರುವುದಾಗಿ ಹೋದವಳು ವಾಪಾಸ್ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಇದೇ ದಿನ ರೈಲ್ವೆ ಪೊಲೀಸರ ಮೂಲಕ ಪೊಲಿಸರಿಗೆ ಆತ್ಮಹತ್ಯೆ ಪ್ರಕರಣದವೊಂದರ ಮಾಹಿತಿ ಲಭ್ಯವಾಗಿತ್ತು. ಯುವಕನ ಮೃತದೇಹದ ಬಳಿ ಇದ್ದ ಫೋನ್ ನಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿದ್ದಾಗಿ ಬರೆದಿದ್ದ.

ತಕ್ಷಣ ಪೊಲೀಸರು ಡ್ರೋಣ್ ಸಹಾಯದಿಂದ ಶವಕ್ಕಾಗಿ ಹುಡುಕಾಟ ನಡೆಸಿದಾಗ ಖಾರ್ಗರ್ ಅರಣ್ಯದಲ್ಲಿ ಯುವತಿ ಶವ ಪತ್ತೆಯಾಗಿದೆ. ಯುವತಿ ವೈಷ್ಣವಿ ಹಾಗೂ 24 ವರ್ಷದ ವೈಭವ್ ಬರುಗಲ್ಲೆ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಜಗಳವಾಗಿ ವೈಷ್ಣವಿ ವೈಭವ್ ನಿಂದ ದೂರವಿರಲು ನಿರ್ಧರಿಸಿದ್ದಳು. ಇದರಿಂದ ಇನ್ನಷ್ಟು ಕೋಪಗೊಂಡಿದ್ದ ವೈಭವ್ ಯುವತಿಯ ಕತ್ತು ಸೀಳಿ ಕೊಲೆಗೈದಿದ್ದ. ಬಳಿಕ ತಾನು ಟ್ರೇನ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

Home add -Advt

ಸಾವಿಗೂ ಮೊದಲು ಗೆಳತಿಯ ಕೊಲೆಯಿಂದ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ವಿವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button