Kannada NewsLatestNational

*ಪಟಾಕಿ ಕೊಂಡೊಯ್ಯುತ್ತಿದ್ದ ಲಾರಿಗೆ ಬೆಂಕಿ; ರಸ್ತೆ ಮಧ್ಯೆಯೇ ಹೊತ್ತಿ ಉರಿದ ವಾಹನ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಗೆ ಪಟಾಕಿ ಕೊಂಡೊಯ್ಯುತ್ತಿದ್ದ ಲಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಅಯೋಧ್ಯೆಗೆ ಲಾರಿಯಲ್ಲಿ ಪಟಾಕಿ ಸಾಗಿಸಲಾಗುತ್ತಿತ್ತು. ಪಟಾಕಿ ತುಂಬಿದ್ದ ಲಾರಿಯಲ್ಲಿ ಉನ್ನಾವೋ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ಪಟಾಕಿಗಳೆಲ್ಲ ಸಿಡಿದು ಸ್ಫೋಟಗೊಂಡಿವೆ.

Home add -Advt

ಸುಮಾರು 3 ಗಂಟೆಗಳ ಕಾಲ ರಸ್ತೆ ಮಧ್ಯೆಯೆ ಲಾರಿಯಲ್ಲಿದ್ದ ಪಟಾಕಿಗಳು ನಿರಂತರವಾಗಿ ಸಿಡಿದಿವೆ. ಇಡೀ ಲಾರಿ ಸುಟ್ಟು ಕರಕಲಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

Back to top button