Belagavi NewsBelgaum NewsKannada NewsLatest

*ಮಹಾನಗರ ಪಾಲಿಕೆಯ ಸಾಮನ್ಯ ಸಭೆ: ಬಜೆಟ್ ಹಂಚಿಕೆಗಾಗಿ ಗಲಾಟೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾಲಿಕೆಯಲ್ಲಿ ವಾಡ್೯ ಬಜೆಟ್ ಕೇವಲ 37 ವಾಡ್೯ಗಳಿಗೆ ಹಂಚಿಕೆ ಮಾಡಿದ್ದಾರೆ. ಬಾಕಿ ವಾರ್ಡ್ ಗಳಿಗೆ ಹಂಚಿಕೆ ಮಾಡಿಲ್ಲ ಏಕೆ ಎಂದು ಪಾಲಿಕೆ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶನಿವಾರ ಬೆಳಗಾವಿ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಸವಿತಾ ಕಾಂಬಳೆ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಮುಜಮ್ಮಿಲ್ ಡೋಣಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯ ವಾಡ್೯ ಬಜೆಟ್ ಸರಿ ಸಮಾನವಾಗಿ ಹಂಚಿಕೆ ಮಾಡಬೇಕು. ಮೇಯರ್ ಕೇವಲ 37 ವಾರ್ಡುಗಳಿಗೆ ಹಂಚಿಕೆ ಮಾಡಿದ್ದು ಸರಿಯಲ್ಲ ಎಂದು ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಗಿರೀಶ್ ದೋಂಗಡಿ, ಮೊದಲು ಸಭೆಯ ಅಜೆಂಡಾ ಪ್ರಕಾರ ಚರ್ಚೆ ನಡೆಸಿ ಈ‌ ವಿಷಯ ಮುಂದಕ್ಕೆ ನೋಡೋಣ ಎಂದರು. ಇದಕ್ಕೆ ಬಗ್ಗದ ವಿಪಕ್ಷ ಸದಸ್ಯರು ವಾಡ್೯ ಬಜೆಟ್ ಕುರಿತು ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು.

ಇದಕ್ಕೂ ಮುನ್ನ ನೂತನವಾಗಿ ಸರಕಾರದಿಂದ ನಾಮನಿರ್ದೇಶಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಉಪ ಮೇಯರ್ ಆನಂದ ಚವ್ಹಾಣ, ಶಾಸಕ ಆಸೀಫ್ ಸೇಠ್, ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button