Kannada NewsKarnataka NewsLatest

*ಕಂದಾಯ ಅಧಿಕಾರಿ ಅಮಾನತು*

ಪ್ರಗತಿವಾಹಿನಿ ಸುದ್ದಿ; ಗದಗ: ನಗರಸಭೆ ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಗದಗದಲ್ಲಿ ನಡೆದಿದೆ.

ಮಹೇಶ್ ಹಡಪದ ಅಮಾನತುಗೊಂಡಿರುವ ಕಂದಾಯ ಅಧಿಕಾರಿ. ಗದಗ ನಗರಸಭೆ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದರನ್ನು ಕರ್ತವ್ಯಲೋಪ ಆರೋದಡಿ ಸಸ್ಪೆಂಡ್ ಮಾಡಲಾಗಿದೆ.

ನಿರಪೇಕ್ಷಣಾ ಪತ್ರ ಪಡೆಯದೇ ಫಾರಂ ನಂ.3 ವಿತರಿಸಿರುವ ಆರೋಪ ಮಹೇಶ್ ವಿರುದ್ಧ ಕೇಳಿಬಂದಿತ್ತು. ನಿಯಮಬಾಹಿರವಾಗಿ 1063 ನಿವೇಶನಗಳಿಗೆ ಫಾರಂ ನಂ.3 ವಿತರಣೆ ಮಾಡಿದ್ದರು. ಸಾರ್ವಜನಿಕ ದೂರಿನ ಮೇರೆಗೆ ತನಿಖೆ ಮಾಡಿದ್ದ ಅಪರ ಜಿಲ್ಲಾಧಿಕಾರಿ ಎಡಿಸಿ ಅನ್ನಪೂರ್ಣ ಮುದಕಮ್ಮನವರ್ ವರದಿ ಆಧರಿಸಿ ಮಹೇಶ್ ಹಡಪದ ಅಮಾನತುಗೊಳಿಸಿ ಡಿಸಿ ಎಂ.ಎನ್.ವೈಶಾಲಿ ಆದೆಶ ಹೊರಡಿಸಿದ್ದಾರೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button