Kannada NewsLatest

*ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ; ಕ್ಯಾನ್ಬೆರಾ: ಸೇನಾ ಹೆಲಿಕಾಪ್ಟರ್ ಒಂದು ಪತನವಾಗಿದ್ದು, ನಾಲ್ವರು ನಾಪತ್ತೆಯಾಗಿರುವ ಘಟನೆ ಆಸ್ಟ್ರೇಲಿಯಾದ ಹ್ಯಾಮಿಲ್ಟನ್ ದ್ವೀಪದ ಬಳಿ ನಡೆದಿದೆ.

ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ ಕ್ವೀನ್ಸ್ ಲ್ಯಾಂಡ್ ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

Home add -Advt

ಯುನೈಟಡ್ ಸ್ಟೇಟ್ ನೊಂದಿಗೆ ಆಸ್ಟ್ರೇಲಿಯಾ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ MRH-90 ತೈಪಾನ್ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಆಸ್ಟ್ರೇಲಿಯಾ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ತಿಳಿಸಿದ್ದಾರೆ.

ವಿಮಾನ ಪತನದಲ್ಲಿ ನಾಪತ್ತೆಯಾಗಿರುವ ನಾಲ್ವರು ಸಿಬ್ಬಂದಿಗಳು ಆಸ್ಟ್ರೇಲಿಯಾದವರೆ ಆಗಿದ್ದು, ಕ್ವೀನ್ ಲ್ಯಾಂಡ್ ಪೊಲೀಸ್, ಯುಎಸ್ ಮಿಲಿಟರಿ ಸಿಬ್ಬಂದಿ ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

Related Articles

Back to top button