Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಗಡಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ಗಡಿಯಲ್ಲಿ ಪುಣೆ ಎಟಿಎಸ್ ತಂಡ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.

ಪುಣೆಯ ಎಟಿಎಸ್ ನಿಂದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮೊಹಮ್ಮದ್ ಇಮ್ರಾನ್ ಅಲಿಯಾಸ್ ಅಮಿರ್ ಖಾನ್, ಮೊಹಮ್ಮದ್ ಯೂಸುಫ್ ಯಾಕೂಬ್ ಸಾಕಿ ಬಂಧಿತರು. ಬೆಳಗಾವಿ ಗಡಿಯ ಅಂಬೋಲಿ ಬಳಿ ಇವರನ್ನು ಬಂಧಿಸಲಾಗಿದೆ.

Home add -Advt

ಕಳೆದ ವಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದ ಪುಣೆ ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರು ಶಂಕಿತರು ನಿಪ್ಪಾಣಿ, ಸಂಕೇಶ್ವರ ಮೂಲಕ ಅಂಬೋಲಿ ಅರಣ್ಯಕ್ಕೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ.

ಆದರೆ ಬೆಳಗಾವಿ ಪೊಲೀಸರು ಈ ವಿಷಯವನ್ನು ಖಚಿತಪಡಿಸಿಲ್ಲ. ಬೆಳಗಾವಿಗೆ ಎಟಿಎಸ್ ತಂಡ ಬಂದಿಲ್ಲ ಎಂಇದ್ದಾರೆ.

Related Articles

Back to top button