Kannada NewsKarnataka NewsLatest

ಬಿಜೆಪಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಗುತ್ತಿಗೊದಾರರೊಬ್ಬರಿಗೆ ಜೀವಬೆದರಿಕೆ, ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿದ ಹಿನ್ನೆಲೆಯಲ್ಲಿ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಲಾರದ ಮುಳಬಾಗಿಲ ನಂಗಳಿ ಗ್ರಾಮದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಂದ್ರದತ್ತ ಅವರು ಹೊರಟಿದ್ದರು ಎನ್ನಲಾಗಿದೆ. ಮುನಿರತ್ನ ವಿರುದ್ಧ 2 ದೂರು ದಾಖಲಾಗಿದೆ. ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗುತ್ತಿಗೆದಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

Home add -Advt

ಮುನಿರತ್ನ ಅವರ ಬಾಯಿ ಶುದ್ಧ ಮಾಡುವಂತೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರೆ. ಅವರನ್ನು ಬಿಜೆಪಿಯಿಂದ ಹೊರಹಾಕುವಂತೆ ಮಾಜಿ ಸಂಸದ ಡಿ.ಕೆ.ಸುರೇಶ ಆಗ್ರಹಿಸಿದ್ದಾರೆ.

ಈ ಮಧ್ಯ ಖಾಸಗಿ ಟಿವಿ ಜೊತೆ ಮಾತನಾಡಿದ ಮುನಿರತ್ನ ಆ ಆಡಿಯೋ ನನ್ನದಲ್ಲ, ನನ್ನದೆಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ.

Related Articles

Back to top button