
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಮುನಿರತ್ನಗೆ ಪೊಲೀಸರು ಮತ್ತೊಂದು ಶಾಕ್ ನೀಡಿದ್ದಾರೆ. ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಾಸಕರ ಕಚೇರಿಗೆ ಬೀಗ ಜಡಿದಿದ್ದಾರೆ.
ಶಾಸಕ ಮುನಿರತ್ನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಚೇರಿಯಿಂದ ಪಟಾಕಿ ಹಂಚಿಕೆ, ದೀಪಾವಳಿ ಗಿಫ್ಟ್ ನೀಡುವುದು ಮಾಡುತ್ತಿದ್ದರು. ಪ್ರತಿ ವರ್ಷವೂ ಶಾಸಕರು ನೀಡುವ ಪಟಾಕಿ, ಭಾರಿ ಗಿಫ್ಟ್ ಗಳಿಗೆ ಜನರು ಮುಗಿಬೀಳುತ್ತಿದ್ದರು. ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾಸಕರ ಕಚೇರಿ ಬಳಿ ಪಟಾಕಿ ವಿತರಣೆಗೆ ವೇದಿಕೆ ನಿರ್ಮಿಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಮುನಿರತ್ನ ಕಚೇರಿಗೆ ಬೀಗ ಜಡಿದಿದ್ದು, ಪಟಾಕಿ ಹಂಚಿಕೆ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ. ಈ ವೇಳೆ ಕಚೇರಿ ಬಳಿ ಬಂದ ಶಾಸಕ ಮುನಿರತ್ನ ಪೊಲೀಸರಿಗೆ ಮನವೊಲಿಕೆ ಮಾಡುವ ಯತ್ನ ಮಾಡಿದರು. ಆದರೂ ಬಗ್ಗದ ಪೊಲೀಸರು ಪಟಾಕಿ ವಿತರಣೆ ಮಾಡುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿ ಪಟಾಕಿ ಹಂಚಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಚೇರಿಗೆ ಬೀಗ ಹಾಕಿ ತೆರಳಿದ್ದಾರೆ.