Kannada NewsKarnataka NewsLatestPolitics
*ಗಣಿಗಾರಿಕೆ ವೃತ್ತಿ ನನ್ನದಲ್ಲ ಎಂದ ಮುನಿರತ್ನ; ಜಿಲೆಟಿನ್ ಸ್ಫೋಟದ ಬಗ್ಗೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮ ಗಣಿಗಾರಿಕೆ ಹಾಗೂ ಜಿಲೆಟಿನ್ ಸ್ಫೋಟ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಈ ಬಗ್ಗೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ ಮಾಡಿದರೆ ಸರ್ಕಾರದಿಂದ ಲೈಸನ್ಸ್ ಪಡೆಯಬೇಕು ಎಂಬುದು ಗೊತ್ತಿದೆ ಎಂದಿದ್ದಾರೆ.
ಮನೆ ಕಟ್ಟುವುದಕ್ಕಾಗಿ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ. ಜಿಲೆಟಿನ್ ಸ್ಫೋಟಿಸಲು ಲೈಸನ್ಸ್ ಇದೆ ಅದು ಗಣಿಗಾರಿಕೆಯಲ್ಲ. ಅದು ಖರೀದಿಸಿದ ಭೂಮಿ. ಸ್ವಂತ ಭೂಮಿಯಲ್ಲ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ